ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಂಕರಮಠ ರಸ್ತೆಯಲ್ಲಿರುವ ಶಂಕರ ಮಠದ ದೇವಸ್ಥಾನದ ಬಾಗಿಲನ್ನು ಮುರಿದು, ದೇವರ ವಿಗ್ರಹಕ್ಕೆ ಹಾಕಲಾಗಿದ್ದ ಸುಮಾರು 8 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದರೋಡೆ ಮಾಡಲಾಗಿದೆ. ದೇವರ ವಿಗ್ರಹದ ಕವಚ ಹಾಗೂ ಒಡವೆಗಳನ್ನು ದೋಚಲಾಗಿದ್ದು, ಗುರುವಾರದಂದು ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದ್ದು, ಸ್ಥಳ ಪರಿಶೀಲಿಸಿದ್ದಾರೆ.
No comments:
Post a Comment