ಕನ್ನಡ ಸಾಹಿತ್ಯ ರತ್ನಗಳು

ಕನ್ನಡ ಸಾಹಿತ್ಯ ರತ್ನಗಳು
Masti, DVG, Kuvempu, Seetharamaiah, Shivarama Karanth, Krishna Rao, Rajaratnam

Saturday 11 September 2010

ಮಳೆಗಾಲದ ಆಕರ್ಷಣೆ

ಅಬ್ಬಿ ಜಲಪಾತವು ಕೊಡಗು ಜಿಲ್ಲೆಯ ಮುಖ್ಯ ಪಟ್ಟಣವಾದ ಮಡಿಕೇರಿಯಿಂದ ಕೇವಲ ೫ ಕಿ.ಮೀ. ದೂರದಲ್ಲಿದೆ. ಮಡಿಕೇರಿಯವರೆಗೆ ಬಸ್ ಸೌಕರ್ಯವಿದ್ದು ಅಲ್ಲಿಂದ ೫ ಕಿ.ಮೀ. ಯಾವುದೇ ಸ್ಥಳೀಯ ಖಾಸಗಿ ವಾಹನವನ್ನು ಹಿಡಿದು ಹೋಗಬಹುದು.ನಂತರ ಸುಮಾರು ೫೦೦ ಮೀ ನಷ್ಟು ಕಾಫಿ ತೋಟದ ಮಧ್ಯೆ ನಡೆದುಕೊಂಡು ಹೋದರೆ ಈ ಸುಂದರವಾದ ಜಲಪಾತ ಕಾಣಸಿಗುತ್ತದೆ. ಮಳೆಗಾಲದ ನಂತರದ ಅವಧಿಯಲ್ಲಿ ಹೋದರೆ ೧೦೭ ಅಡಿ ಎತ್ತರದಿಂದ ಮೈದುಂಬಿಕೊಂಡು ಧುಮುಕುವ ಜಲಪಾತದ ವೈಭವವನ್ನು ಸವಿಯಬಹುದು.



:ಕಾವೇರಿ ಜಲಾನಯನ ಪ್ರದೇಶಗಳಲ್ಲಿ, ಭಾಗಮಂಡಲದ ಸುತ್ತ ಮುತ್ತ ಮಳೆ ಸುರಿಯುತ್ತಿದ್ದಾಗ ಕನ್ನಡ ನಾಡಿನ ಜೀವನದಿ ಕಾವೇರಿ ಉಕ್ಕಿ ಹರಿಯುತ್ತದೆ. ಕೊಡಗಿನ ರಮಣೀಯ ಹಸಿರು ರಾಶಿಯ ಮೇಲೆ ಮಳೆಯ ಹನಿಗಳು ಬೀಳುತ್ತಿದ್ದಂತೆಯೇ ಇಲ್ಲಿನ ವಿಖ್ಯಾತ ಜಲಪಾತ ‘ಅಬ್ಬೆ’ ಮೈದುಂಬಿ ಧುಮ್ಮುಕ್ಕುತ್ತದೆ. ಹಾಲು ನೊರೆಯಂತೆ ಆಕರ್ಷಕವಾಗಿ ಧುಮ್ಮಿಕ್ಕುವ ಅಬ್ಬಿ, ತನ್ನ ಪೂರ್ಣ ಸೊಬಗನ್ನು ಪಡೆವುದೇ ಮಳೆಗಾಲದಲ್ಲಿ. ಹೀಗಾಗೆ ಅಬ್ಬಿಗೆ ಮಳೆಗಾಲದ ಮದುಮಗಳು ಎಂಬ ಹೆಸರೂ ಇದೆ.



ರಭಸದಿಂದ ಭೋರ್ಗರೆವ ಅಬ್ಬಿಯ ಆರ್ಭಟ ಮಳೆಗಾಲದಲ್ಲಿ ಅರ್ಧ ಕಿಲೋ ಮೀಟರ್ ದೂರ ಕೇಳುತ್ತದೆ. ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಅಬ್ಬಿಯ ಜಲಪಾತ ಹಾಲು ನೊರೆಯಂತಹ ರಮಣೀಯ ದೃಶ್ಯದೊಂದಿಗೆ ಮತ್ತಷ್ಟು ಕಳೆಗಟ್ಟುತ್ತದೆ. ನೋಡುಗರಿಗೆ ಅಮಿತಾನಂದವನ್ನು ನೀಡುತ್ತದೆ.



ಇಲ್ಲಿರುವ ತೂಗುಯ್ಯಾಲೆಯ ಮೇಲೆ ಮಳೆಯಲ್ಲಿ ತೋಯುತ್ತಾ, ಅತ್ತಿಂದಿತ್ತ, ಇತ್ತಿಂದತ್ತ ಓಲಾಡುತ್ತಾ ಸಾಗಿದರೆ, ಧುಮ್ಮಿಕ್ಕುವ ಭೋರ್ಗರೆಯುತ್ತಾ ಧುಮ್ಮಿಕ್ಕುವ ಅಬ್ಬಿಯ ಜಲಹನಿಗಳೂ ನಿಮಗೆ ಪನ್ನೀರ ಎರಚುತ್ತಾ ಸ್ವಾಗತ ಕೋರುತ್ತವೆ. ಬೇಸಿಗೆಯಲ್ಲಿ ಒಣಗಿ ತನ್ನ ಸೊಬಗನ್ನು ಕಳೆದುಕೊಳ್ಳುವ ಮನೋಹರವಾದ ಅಬ್ಬಿ ಜಲಪಾತದ ಸೊಬಗನ್ನು ಸವಿಯಲು ಮಳೆಗಾಲವೇ ಸೂಕ್ತ.

Friday 26 March 2010

ಪಲ್ಲವಿ ಎಂ ಡಿ, ಸಿ ಅಶ್ವಥ್ in ಕನ್ನಡವೇ ಸತ್ಯ



ಮುಕ್ತ mukta



ತಪ್ಪು ಮಾಡದೋರ್ ಯಾರವ್ರೆ

Saturday 13 March 2010

ಸ್ವರ ಸ್ಮರಣೆ - ಒಂದು ಸ್ಮರಣೆ


ಸ್ವರ ಸ್ಮರಣೆ - ಒಂದು ಸ್ಮರಣೆ
ನಾನು ದಿನಾ ತಪ್ಪದೆ ಮಾಡುವಂಥ ಒಂದು ಕೆಲಸ ಅಂದ್ರೆ thatskannada.ವೆಬ್ ಸೈಟ್ ಚೆಕ್ ಮಾಡೋದು... ಒಂದು ದಿನಾ ನಾನು ತುಂಬಾ ವರ್ಷದಿಂದ ಜಾತಕ ಪಕ್ಷಿ ತರ ಕಾಯ್ತಾ ಇದ್ದ ಒಂದು ಕಾರ್ಯಕ್ರಮದ ಬಗ್ಗೆ ಒಂದು ಲೇಖನ ಕಾಣ್ತು.. ಸಿಕ್ಕಾಪಟ್ಟೆ ಸಂತೋಷ ಆಗಿ ಬಿಡ್ತು ಅದನ್ನ ನೋಡಿ...ಯಾಕೆ ಅಂದ್ರೆ ಅದು ನಮ್ಮ ಎಂ ಡಿ ಪಲ್ಲವಿ ಅವರ ಲೈವ್ ಕಾರ್ಯಕ್ರಮದ ಜಾಹಿರಾತು. ಅದೇ "ಸ್ವರ ಸ್ಮರಣೆ" (Swara Smarane ). ಆದ್ರೆ ದಿನಾ ಮಾತ್ರ ಗುರುವಾರ, ಯೋಚನೆ ಮಾಡ್ದೆ..."Is it worth taking a day off for the program " ಅಂತ.. ಇದೇ ರೀತಿ ಸಿ. ಅಶ್ವತ್ಥ ಬಗ್ಗೆ ಯೋಚನೆ ಮಾಡಿ,, ಕೊನೆಗೂ ಅವರ ದರ್ಶನ ಆಗಲಿಲ್ಲ,,,so ನಾನು ಹೋಗೋ ಮುಂಚೆ ಪಲ್ಲವಿ ಅವರನ್ನು ನೋಡಬೇಕು ಅಂತ decide ಮಾಡಿ ಬಿಟ್ಟೆ..ರಜ ಅಂತೂ sanction ಆಯ್ತು.. tx to my TL ...
ಅಂತು ಇಂತೂ ಟಿಕೆಟ್ ಬುಕ್ ಆಯ್ತು.,.ಆ ದಿನಾನು ಬಂತು,,, ಬೆಂಗಳೂರು ಚೌಡಯ್ಯ ಸ್ಮಾರಕ ಭವನದಲ್ಲಿ ಅರ್ಧ ಗಂಟೆ ಮುಂಚೆನೇ ಹೋಗಿ ಬರೋ ಮಹಾ ಜನತೆಯನ್ನು ನೋಡ್ತಾ ನಿಂತಿದ್ದೆ,,,ಒಂದೇ ಒಂದೇ ಆಸೆಯೊಂದಿಗೆ,...ಪಲ್ಲವಿ ಅಲ್ಲೇ ಎಲ್ಲಾರು ಬರಬಹುದು ಅಂತ...(ಕಾಣದ ಕಡಲಿಗೆ ಹಂಬಲಿಸಿದೆ ಮನ,, ಅಂತ ನನ್ನ ತಲೆಯಲ್ಲಿ ಹಾಡು play ಆಗ್ತಾ ಇತ್ತು.,).. ಕಾಣದ ಕಡಲು ಸಿಗದೇ ಇದ್ರೂ,, ಕಾಣದ ಬೆಟ್ಟ ಕಂಡು ಬಿಡ್ತು...Thats MR ಅರುಣ್ ಕುಮಾರ್ .("ಇವರು ಯಾರು ಬಲ್ಲಿರೇನು? ಪಲ್ಲವಿಯವರ ಯಜಮಾನರು ಗೊತ್ತಿಲ್ಲವೇನು?).. ಅವರು ಒಂದು ಕಾರಿಂದ ಇಳಿತ ಇದ್ರು.. ಅಂಥಹ ದೊಡ್ಡ ಬಾಡಿ ಅಂಥ ಚಿಕ್ಕ ಗಾಡಿಯಲ್ಲಿ ಹೇಗೆ ಫಿಟ್ ಆಯ್ತೋ ಗೊತ್ತಿಲ್ಲ. ಅಂತು  ಅದೇ ಕಾರು ಅಂತ confirm ಆಯ್ತು...ಸ್ವಲ್ಪ ಹೊತ್ತು ಅಲ್ಲೇ ನಿಂತಿದ್ದೆ...ಯಾಕೋ ಅರುಣ್ ಸ್ವಲ್ಪ.. ಅಲ್ಲ, ಅಲ್ಲ ಸಿಕ್ಕಾಪಟ್ಟೆ ದಪ್ಪ ಆಗಿಬಿಟ್ಟಿದಾರೆ ಅಂತ ಅಂತ ಅನಿಸ್ತ ಇತ್ತು, (ಆಮೇಲೆ ಗೂತಾಯ್ತು ಅದು ಅರುಣ್ ಅಲ್ಲ ಅಂತ) , Anyway its was the time to Swara Smarane . 7 ಗಂಟೆಗೆ ಶುರುವಾಗಬೇಕಿದ್ದ ಕಾರ್ಯಕ್ರಮ 7 .18 ಕ್ಕೆ ಶುರು ಆಯ್ತು.. Stage Design was excellent ...
,
ಮೊದಲೇ ತಿಳಿಸಿದ ಹಾಗೆ ಪಲ್ಲವಿ ಅವರು ಪಿ ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್, ರಾಜು ಅನಂತಸ್ವಾಮಿ, ಜಿ.ವಿ.ಅತ್ರಿ, ಪದ್ಮಚರಣ್, ಎಚ್.ಕೆ.ನಾರಾಯನ್ ಹಾಗೂ ವಸಂತ್ ಕನಕಾಪುರ್ ಅವರು ಸಂಯೋಜನೆ ಮಾಡಿದ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದರು..
ಮೊದಲ ಹಾಡು ನಮ್ಮೆಲರ ಹೃದಯಕ್ಕೆ ಬಹಳ ಹತ್ತಿರವಾದಂತಹ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು, ರಾಜನ್ಯರಿಪು ಪರಶುರಾಮನಮ್ಮನ ನಾಡು, ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು......ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು,,,ಕಾವೇರಿ ಗೋದೆಯರು ಮೈದೊಳೆವ ನಲುನಾಡು" ಈ ಹಾಡನ್ನ ತುಂಬಾ ಗಾಯಕರಿಂದ ಕೇಳಿದ್ದೆ...ಆದರೆ ಪಲ್ಲವಿಯವರ ಕಂಠಸಿರಿಯಿಂದ ಬಂದತಹ ಈ ಗೀತೆ ಅಲ್ಲಿ ನೆರೆದ ಎಲ್ಲ ಜನರನ್ನ ಮೈ ಮರೆಯುವಂತೆ ಮಾಡಿತು. (ಇಗಲೂ ಸಹ ಆ ಹಾಡನ್ನ ನೆಟ್ ಅಲ್ಲಿ ಹುಡುಕ್ತಾ ಇದೀನಿ,,,ಸಿಕ್ತ ಇಲ್ಲ.). ಆಮೇಲೆ ಶುರು ಆಯ್ತು ನೋಡಿ..... a flood of melody .. ದೇಹವೊಂದು ದೇವವೀಣೆ , ಸೋರುತಿಹುದು ಮನೆಯ ಮಾಳಿಗೆ, ಇಳಿದು ಬಾ ತಾಯೇ ಇಳಿದು ಬಾ, ಮಡಿಕೇರಿಲಿ ಮಂಜು,,,  But when she came up with ನಾಕು ತಂತಿ,, we couldnt say anything other than "once more"....

ಎಂ ಡಿ ಪಲ್ಲವಿ ಅವರು ಮಾತ್ರ ಆ high pitch ನಲ್ಲಿ ಆ ಹಾಡಿಗೆ ಜೀವ ಕೊಡಲು ಸಾದ್ಯ... ಕೆಲವು ಹಾಡುಗಳು ಅಶ್ವಥ್ ಅವರ ನೆನಪು ಮರುಕಳಿಸುವಂತೆ ಮಾಡ್ತು. ಆಮೇಲೆ ಅವರ CD ಬಿಡುಗಡೆ ಸಮಾರಂಭ, ಅದನಂತರ SP ಮತ್ತು KLS ಸ್ವಾಮಿ ಅವರಿಂದ ಹಾಸ್ಯ ಚಟಾಕಿಗಳು... ನಂತರ ಎರಡು ಸುಮದುರ ಹಾಡುಗಳು... ಒನ್ ವಾಸ್ ದಿ ಕ್ಲಾಸಿಕ್ ಸಾಂಗ್...ದೀಪವು ನಿನ್ನದೇ ಗಾಳಿಯು ನಿನ್ನದೇ,...ಕೇಳುವ ಭಾಗ್ಯ ಪಡೆದ ಕಿವಿಗಳು ಸಹ ನಮ್ಮದೇ... ಅಲ್ಲಿಗೆ ಕಾರ್ಯಕ್ರಮ ಮುಗಿತು,..ನಾವು ಗಾಡಿ ಬಿಡಬೇಕಾಯ್ತು... ಸಿಕ್ಕಾಪಟ್ಟೆ ಸಿಹಿ ನೆನಪುಗಳೊಂದಿಗೆ....

ಈಗಲೂ ಪಲ್ಲವಿ ಹಾಡು ಕೇಳಿದರೆ ಅವರ ಲೈವ್ concert ನೆನಪಾಗತ್ತೆ.. ಮುಂದಿನ ಕಾರ್ಯಕ್ರಮಕ್ಕೆ ಕಾಯ್ತಾ ಇದೀನಿ... ದಿನಾ Thatskannada ನೋಡ್ತಾ ಇದೀನಿ... ಕೇಳದ ದನಿಗೆ ಹಂಬಲಿಸಿದೆ ಮನ... ಕೆಳಬಲ್ಲೆನೆ ಒಂದು ದಿನಾ,,, ? ಕೇಳದ ದನಿಯನು..

Friday 1 January 2010

ಹೇಳಿ ಹೋಗು ಕಾರಣ, ಹೋಗುವ ಮೊದಲು

ಇಹಲೋಕದ ಹಾಡು ಮುಗಿಸಿದ ಸುಗಮ ಸಂಗೀತ ಗಾನ ಗಾರುಡಿಗ ಸಿ. ಅಶ್ವಥ್



















ಸಿ ಅಶ್ವತ್ಥ್ - (೧೯೩೯) ಹೆಸರಾಂತ ಸಂಗೀತ ನಿರ್ದೇಶಕರು, ಕಲಾವಿದರು. ಕನ್ನಡ ರಂಗಭೂಮಿ, ಸಿನೆಮಾ ಹಾಗೂ ಸುಗಮ ಸಂಗೀತ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿರುವ ಇವರು ಜನಿಸಿದ್ದು ಡಿಸೆಂಬರ್ ೨೯, ೧೯೩೯ರಲ್ಲಿ. ಇವರು ವ್ಯಾಸಂಗ ಮಾಡಿದ್ದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ. ಐ ಟಿ ಐ ನಲ್ಲಿ ೨೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಕೊನೆಗೆ ೧೯೯೨ರಲ್ಲಿ ನಿವೃತ್ತಿ ಪಡೆದರು.

ಚಿಕ್ಕವರಿದ್ದಾಗಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ ಇವರು ಹಿಂದೂಸ್ಥಾನೀ ಸಂಗೀತವನ್ನು ದೇವಗಿರಿ ಶಂಕರರಾವ್ ಅವರ ಬಳಿ ಕಲಿತು, ನಂತರ ನಾಟಕಗಳಿಗೆ ಸಂಗೀತ ನೀಡಿದರು. ಕಾಕನಕೋಟೆ ಚಿತ್ರದ ಮೂಲಕ ಚಿತ್ರ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು.

ಮೂತ್ರಪಿಂಡ ಹಾಗೂ ಪಿತ್ತಕೋಶದ ತೊಂದರೆಯಿಂದ ಬಳಲುತ್ತಿದ್ದ ಇವರು ಡಿಸೆಂಬರ್ ೨೯, ೨೦೦೯ ರಂದು, ತಮ್ಮ ೭೧ನೇ ಜನ್ಮದಿನದಂದೇ ಕೊನೆಯುಸಿರೆಳೆದರು.

ಹಿಂದೆ ಎಲ್ಲೋ ಓದಿದ ನೆನಪು. ನಾಗಮಂಡಲ ಚಿತ್ರದ "ಈ ಹಸಿರು ಸಿರಿಯಲಿ" ಹಾಡನ್ನು ಸಂಗೀತ ಕಟ್ಟಿಯವರು ಮೊದಲ ಸಲ ಹಾಡಿದಾಗ, ಸಿ ಅಶ್ವಥ್ ಅವರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದರಂತೆ. ಅವರ ಹಾಡಿನಲ್ಲಿದ್ದ ಹಲವು ತಪ್ಪುಗಳನ್ನು ಹುಡುಕಿ, ತಿದ್ದಿ, ಅದ್ಭುತವಾದ ಹಾಡೊಂದನ್ನು ಕನ್ನಡಿಗರಿಗೆ ಕೊಟ್ಟು, ಕಟ್ಟಿಯವರ ಪ್ರತಿಭೆಯನ್ನು ಎತ್ತಿ ಹಿಡಿದವರು ಸಿ ಅಶ್ವಥ್. ತಪ್ಪಾಗಿ ಸ್ವರ ಎತ್ತಿದ ಯಾರೆ ಆಗಲಿ, ಅಶ್ವಥ್ ಅವರ ಟೀಕೆಯನ್ನು ಸಹಿಸಿಕೊಳ್ಳಲೇ ಬೇಕಾಗುತ್ತಿತ್ತು. ಹಲವಾರು ಗಾಯಕ/ಗಾಯಕಿಯರು ಅಶ್ವಥ್ ಅವರ ನಿರ್ದೇಶನದಲ್ಲಿ ಹಾಡಲು ಹೆದರುತ್ತಿದ್ದರಂತೆ! ಅಶ್ವಥ್ ರವರ (ಆರೋಗ್ಯಕರವಾದ) ಟೀಕೆಗಳ ಉದ್ದೇಶ ಮಾತ್ರ ಇಷ್ಟೇ: ಒಬ್ಬ ಗಾಯಕನಲ್ಲಿ ಹುದುಗಿರುವ ಪ್ರತಿಭೆಯನ್ನು ಎತ್ತಿ ಹಿಡಿಯುವುದು.




ಧೂಳು ಹಿಡಿದು ಹಾಳಾಗಿ ಹೋಗಿದ್ದ ಹಲವಾರು ಜಾನಪದ ಗೀತೆಗಳಿಗೆ ತಮ್ಮ ಕಂಚಿನ ಕಂಠದಿಂದ ಜೀವ ತುಂಬಿದ್ದ ಅಶ್ವಥ್ ಇಂದು ತಮ್ಮ ಜೀವನವೆಂಬ ಹಾಡನ್ನು ಮುಗಿಸಿದ್ದಾರೆ. ಕನ್ನಡ ಸುಗಮ ಸಂಗೀತಕ್ಕೆ, ಕನ್ನಡಿಗರಿಗೆ ಇದೊಂದು ತುಂಬಲಾರದ ನಷ್ಟ. ಕರ್ನಾಟಕದಲ್ಲಷ್ಟೇ ಅಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲೂ ಸಹ ಕನ್ನಡದ ಜಾನಪದ ಗೀತೆಗಳನ್ನು ಭಾವತುಂಬಿ ಹಾಡಿ ಕನ್ನಡಿಗರನ್ನು ಆನಂದಿಸಿದ್ದಾರೆ. "ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್ ಒಂದು ಕಾಲದಲ್ಲಿ Scorpion, Sting, Deep Purple, the sprawling, Bryan Adams, ಇನ್ನಿತರ ಪಾಶ್ಚಿಮಾತ್ಯ ಸಂಗೀತಗಾರರಿಂದ ಮಾತ್ರ ಕಿಕ್ಕಿರಿದಿರುತ್ತಿತ್ತು. ಅಲ್ಲಿ "ಕನ್ನಡವೇ ಸತ್ಯ" ಎಂಬ ಧ್ವನಿ ಎತ್ತಿ, ಸುಮಾರು ಇಪ್ಪತ್ತು ಸಾವಿರ ಪ್ರೇಕ್ಷರನ್ನು ದಿಙ್ಮೂಢರನ್ನಾಗಿಸಿದ ಹೆಮ್ಮೆ ಅಶ್ವಥ್ ಅವರದು [The Hindu]". "ಕನ್ನಡವೇ ಸತ್ಯ", "ಎಲ್ಲೋ ಹುದುಕಿದೆ ಇಲ್ಲದ ದೇವರ ಕಲ್ಲು ಮುಳ್ಳುಗಳ ಗುಡಿಯೊಳಗೆ", "ಸೋರುತಿಹುದು ಮನೆಯ ಮಾಳಿಗಿ", "ತವರಲ್ಲ ತಗಿ ನಿನ್ನ ತಂಬೂರಿ - ಸ್ವರ", "ಉಳುವ ನೇಗಿಲ ಯೋಗಿ", "ಗುಪ್ತ ಗಾಮಿನಿ, ನನ್ನ ಶಾಲ್ಮಲ", ಇತ್ಯಾದಿ ಹಾಡುಗಳು ಕನ್ನಡಿಗರನ್ನು ಅನಂತ ಕಾಲ ಆನಂದಿಸುತ್ತಲೇ ಇರುತ್ತವೆ.



ಸಿ. ಆಶ್ವಥ್ ಅವರಿಗೆ ಸಂಗೀತ ಕಾರ್ಯಕ್ರಮಕ್ಕೆ ಹೋದ ಕಡೆಗಳೆಲ್ಲೇಲ್ಲಾ ಅಭೂತಪೂರ್ವ ಸ್ವಾಗತ ದೊರೆಯುತ್ತಿತ್ತು. ಕರ್ನಾಟಕದಲ್ಲಿ, ಗಡಿನಾಡಿನಲ್ಲಿ, ಕಡಲಾಚೆಯಲ್ಲಿರುವ ಸಹಸ್ರಾರು ಕನ್ನಡಿಗರು ಈ ಶ್ರೇಷ್ಟ ಕಲಾವಿದನಿಗೆ ಮನ್ನಣೆ ನೀಡಿದ್ದಾರೆ, ಗೌರವಿಸಿದ್ದಾರೆ. ನಮ್ಮ ತಲೆಮಾರಿನ ಶ್ರೇಷ್ಟ ಗಾಯಕರಲ್ಲಿ ಒಬ್ಬರಾದ ಆಶ್ವಥ್ ನಮ್ಮನ್ನಗಲಿದ್ದು ಕನ್ನಡ ಸಂಗೀತಕ್ಕೆ ತುಂಬಲಾರದ ನಷ್ಟ. ಸುಗಮ ಸಂಗೀತದಲ್ಲಿ ಅವರು ಗಿಟ್ಟಿಸಿದ ಸ್ಥಾನವನ್ನು ಮತ್ತಾರು ಪಡೆಯಲಾರರು. ಅವರ ಸಂಗೀತ ಅಮರ. ಮತ್ತೆ ಹುಟ್ಟಿ ಬರಲಿ ಅಶ್ವಥ್!



ನಮ್ಮ ಭಾವನೆಗಳಿಗೆ ರಾಗವಾದಿರಿ, ಹಾಡಾದಿರಿ

ಮತ್ತೆ ನಿಶ್ಯಬ್ಧವಾಗಿ ನಮ್ಮನ್ನು ಅಗಲಿದಿರಿ.

ಈಗಲೂ ನಮ್ಮೆಲ್ಲರ ಎದೆಯಲ್ಲಿ ನಿಮ್ಮದೇ ರಾಗ, ನಿಮ್ಮದೇ ಹಾಡು.

ಇಹಲೋಕವನ್ನು ತ್ಯಜಿಸಿದರೇನು..

ನಿಮ್ಮನ್ನು ಎದೆಯಲ್ಲಿ ತುಂಬಿಕೊಂಡಿರುವೆವು ನಾವು.

ಏಕೆಂದರೆ, ನಮ್ಮ ಭಾವನೆಗಳಿಗೆ ಅರ್ಥ ನೀಡಿದವರು ನೀವು.

 
ನಿಮ್ಮ ಅಭಿಮಾನಿ
ಸದಾಶಿವ ಬಾಯರಿ