ಕನ್ನಡ ಸಾಹಿತ್ಯ ರತ್ನಗಳು
Friday, 26 March 2010
Saturday, 13 March 2010
ಸ್ವರ ಸ್ಮರಣೆ - ಒಂದು ಸ್ಮರಣೆ
ಸ್ವರ ಸ್ಮರಣೆ - ಒಂದು ಸ್ಮರಣೆ
ನಾನು ದಿನಾ ತಪ್ಪದೆ ಮಾಡುವಂಥ ಒಂದು ಕೆಲಸ ಅಂದ್ರೆ thatskannada.ವೆಬ್ ಸೈಟ್ ಚೆಕ್ ಮಾಡೋದು... ಒಂದು ದಿನಾ ನಾನು ತುಂಬಾ ವರ್ಷದಿಂದ ಜಾತಕ ಪಕ್ಷಿ ತರ ಕಾಯ್ತಾ ಇದ್ದ ಒಂದು ಕಾರ್ಯಕ್ರಮದ ಬಗ್ಗೆ ಒಂದು ಲೇಖನ ಕಾಣ್ತು.. ಸಿಕ್ಕಾಪಟ್ಟೆ ಸಂತೋಷ ಆಗಿ ಬಿಡ್ತು ಅದನ್ನ ನೋಡಿ...ಯಾಕೆ ಅಂದ್ರೆ ಅದು ನಮ್ಮ ಎಂ ಡಿ ಪಲ್ಲವಿ ಅವರ ಲೈವ್ ಕಾರ್ಯಕ್ರಮದ ಜಾಹಿರಾತು. ಅದೇ "ಸ್ವರ ಸ್ಮರಣೆ" (Swara Smarane ). ಆದ್ರೆ ದಿನಾ ಮಾತ್ರ ಗುರುವಾರ, ಯೋಚನೆ ಮಾಡ್ದೆ..."Is it worth taking a day off for the program " ಅಂತ.. ಇದೇ ರೀತಿ ಸಿ. ಅಶ್ವತ್ಥ ಬಗ್ಗೆ ಯೋಚನೆ ಮಾಡಿ,, ಕೊನೆಗೂ ಅವರ ದರ್ಶನ ಆಗಲಿಲ್ಲ,,,so ನಾನು ಹೋಗೋ ಮುಂಚೆ ಪಲ್ಲವಿ ಅವರನ್ನು ನೋಡಬೇಕು ಅಂತ decide ಮಾಡಿ ಬಿಟ್ಟೆ..ರಜ ಅಂತೂ sanction ಆಯ್ತು.. tx to my TL ...
ಅಂತು ಇಂತೂ ಟಿಕೆಟ್ ಬುಕ್ ಆಯ್ತು.,.ಆ ದಿನಾನು ಬಂತು,,, ಬೆಂಗಳೂರು ಚೌಡಯ್ಯ ಸ್ಮಾರಕ ಭವನದಲ್ಲಿ ಅರ್ಧ ಗಂಟೆ ಮುಂಚೆನೇ ಹೋಗಿ ಬರೋ ಮಹಾ ಜನತೆಯನ್ನು ನೋಡ್ತಾ ನಿಂತಿದ್ದೆ,,,ಒಂದೇ ಒಂದೇ ಆಸೆಯೊಂದಿಗೆ,...ಪಲ್ಲವಿ ಅಲ್ಲೇ ಎಲ್ಲಾರು ಬರಬಹುದು ಅಂತ...(ಕಾಣದ ಕಡಲಿಗೆ ಹಂಬಲಿಸಿದೆ ಮನ,, ಅಂತ ನನ್ನ ತಲೆಯಲ್ಲಿ ಹಾಡು play ಆಗ್ತಾ ಇತ್ತು.,).. ಕಾಣದ ಕಡಲು ಸಿಗದೇ ಇದ್ರೂ,, ಕಾಣದ ಬೆಟ್ಟ ಕಂಡು ಬಿಡ್ತು...Thats MR ಅರುಣ್ ಕುಮಾರ್ .("ಇವರು ಯಾರು ಬಲ್ಲಿರೇನು? ಪಲ್ಲವಿಯವರ ಯಜಮಾನರು ಗೊತ್ತಿಲ್ಲವೇನು?).. ಅವರು ಒಂದು ಕಾರಿಂದ ಇಳಿತ ಇದ್ರು.. ಅಂಥಹ ದೊಡ್ಡ ಬಾಡಿ ಅಂಥ ಚಿಕ್ಕ ಗಾಡಿಯಲ್ಲಿ ಹೇಗೆ ಫಿಟ್ ಆಯ್ತೋ ಗೊತ್ತಿಲ್ಲ. ಅಂತು ಅದೇ ಕಾರು ಅಂತ confirm ಆಯ್ತು...ಸ್ವಲ್ಪ ಹೊತ್ತು ಅಲ್ಲೇ ನಿಂತಿದ್ದೆ...ಯಾಕೋ ಅರುಣ್ ಸ್ವಲ್ಪ.. ಅಲ್ಲ, ಅಲ್ಲ ಸಿಕ್ಕಾಪಟ್ಟೆ ದಪ್ಪ ಆಗಿಬಿಟ್ಟಿದಾರೆ ಅಂತ ಅಂತ ಅನಿಸ್ತ ಇತ್ತು, (ಆಮೇಲೆ ಗೂತಾಯ್ತು ಅದು ಅರುಣ್ ಅಲ್ಲ ಅಂತ) , Anyway its was the time to Swara Smarane . 7 ಗಂಟೆಗೆ ಶುರುವಾಗಬೇಕಿದ್ದ ಕಾರ್ಯಕ್ರಮ 7 .18 ಕ್ಕೆ ಶುರು ಆಯ್ತು.. Stage Design was excellent ...
ಮೊದಲೇ ತಿಳಿಸಿದ ಹಾಗೆ ಪಲ್ಲವಿ ಅವರು ಪಿ ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್, ರಾಜು ಅನಂತಸ್ವಾಮಿ, ಜಿ.ವಿ.ಅತ್ರಿ, ಪದ್ಮಚರಣ್, ಎಚ್.ಕೆ.ನಾರಾಯನ್ ಹಾಗೂ ವಸಂತ್ ಕನಕಾಪುರ್ ಅವರು ಸಂಯೋಜನೆ ಮಾಡಿದ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದರು..
ಮೊದಲ ಹಾಡು ನಮ್ಮೆಲರ ಹೃದಯಕ್ಕೆ ಬಹಳ ಹತ್ತಿರವಾದಂತಹ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು, ರಾಜನ್ಯರಿಪು ಪರಶುರಾಮನಮ್ಮನ ನಾಡು, ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು......ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು,,,ಕಾವೇರಿ ಗೋದೆಯರು ಮೈದೊಳೆವ ನಲುನಾಡು" ಈ ಹಾಡನ್ನ ತುಂಬಾ ಗಾಯಕರಿಂದ ಕೇಳಿದ್ದೆ...ಆದರೆ ಪಲ್ಲವಿಯವರ ಕಂಠಸಿರಿಯಿಂದ ಬಂದತಹ ಈ ಗೀತೆ ಅಲ್ಲಿ ನೆರೆದ ಎಲ್ಲ ಜನರನ್ನ ಮೈ ಮರೆಯುವಂತೆ ಮಾಡಿತು. (ಇಗಲೂ ಸಹ ಆ ಹಾಡನ್ನ ನೆಟ್ ಅಲ್ಲಿ ಹುಡುಕ್ತಾ ಇದೀನಿ,,,ಸಿಕ್ತ ಇಲ್ಲ.). ಆಮೇಲೆ ಶುರು ಆಯ್ತು ನೋಡಿ..... a flood of melody .. ದೇಹವೊಂದು ದೇವವೀಣೆ , ಸೋರುತಿಹುದು ಮನೆಯ ಮಾಳಿಗೆ, ಇಳಿದು ಬಾ ತಾಯೇ ಇಳಿದು ಬಾ, ಮಡಿಕೇರಿಲಿ ಮಂಜು,,, But when she came up with ನಾಕು ತಂತಿ,, we couldnt say anything other than "once more"....
ಎಂ ಡಿ ಪಲ್ಲವಿ ಅವರು ಮಾತ್ರ ಆ high pitch ನಲ್ಲಿ ಆ ಹಾಡಿಗೆ ಜೀವ ಕೊಡಲು ಸಾದ್ಯ... ಕೆಲವು ಹಾಡುಗಳು ಅಶ್ವಥ್ ಅವರ ನೆನಪು ಮರುಕಳಿಸುವಂತೆ ಮಾಡ್ತು. ಆಮೇಲೆ ಅವರ CD ಬಿಡುಗಡೆ ಸಮಾರಂಭ, ಅದನಂತರ SP ಮತ್ತು KLS ಸ್ವಾಮಿ ಅವರಿಂದ ಹಾಸ್ಯ ಚಟಾಕಿಗಳು... ನಂತರ ಎರಡು ಸುಮದುರ ಹಾಡುಗಳು... ಒನ್ ವಾಸ್ ದಿ ಕ್ಲಾಸಿಕ್ ಸಾಂಗ್...ದೀಪವು ನಿನ್ನದೇ ಗಾಳಿಯು ನಿನ್ನದೇ,...ಕೇಳುವ ಭಾಗ್ಯ ಪಡೆದ ಕಿವಿಗಳು ಸಹ ನಮ್ಮದೇ... ಅಲ್ಲಿಗೆ ಕಾರ್ಯಕ್ರಮ ಮುಗಿತು,..ನಾವು ಗಾಡಿ ಬಿಡಬೇಕಾಯ್ತು... ಸಿಕ್ಕಾಪಟ್ಟೆ ಸಿಹಿ ನೆನಪುಗಳೊಂದಿಗೆ....
ಈಗಲೂ ಪಲ್ಲವಿ ಹಾಡು ಕೇಳಿದರೆ ಅವರ ಲೈವ್ concert ನೆನಪಾಗತ್ತೆ.. ಮುಂದಿನ ಕಾರ್ಯಕ್ರಮಕ್ಕೆ ಕಾಯ್ತಾ ಇದೀನಿ... ದಿನಾ Thatskannada ನೋಡ್ತಾ ಇದೀನಿ... ಕೇಳದ ದನಿಗೆ ಹಂಬಲಿಸಿದೆ ಮನ... ಕೆಳಬಲ್ಲೆನೆ ಒಂದು ದಿನಾ,,, ? ಕೇಳದ ದನಿಯನು..
Subscribe to:
Posts (Atom)