ಕನ್ನಡ ಸಾಹಿತ್ಯ ರತ್ನಗಳು

ಕನ್ನಡ ಸಾಹಿತ್ಯ ರತ್ನಗಳು
Masti, DVG, Kuvempu, Seetharamaiah, Shivarama Karanth, Krishna Rao, Rajaratnam

Sunday 9 June 2013

ಹೊಸ ಜನ ಹೊಸ ಚಾರಣ ಹೊಸ "ಅನುಭವ"

ಚಿತ್ರ ಕೃಪೆ : ಗಿರೀಶ್ 

ಕಾಳಿದಾಸ ಅವನ ಮೇಘದೂತ ಕಾವ್ಯದಲ್ಲಿ ಜಾತಕ ಪಕ್ಷಿಯ ಬಗ್ಗೆ ವರ್ಣಿಸಿದಂತೆ, ಆ ಪಕ್ಷಿ ಮಳೆಗಾಲಕ್ಕೆ ಕಾದು ಕುಳಿತು, ಮಳೆ ಬಂದಾಗ ತನ್ನ ತಲೆ ಮೇಲಿರುವ ಕೊಕ್ಕೆ ತರಹದ ಪ್ರದೇಶದಿಂದ ಮಳೆ ನೀರನ್ನು ಸಂಗ್ರಹಿಸಿ ಕುಡಿಯುತ್ತದೆ. ಬೇರೆ ಸಮಯದಲ್ಲಿ  ಮಳೆಗಾಗಿ ಕಾದು, ನೀರಡಿಕೆಯಾದಾಗ ವರುಣ ದೇವನಲ್ಲಿ ಮಳೆಗಾಗಿ ಪ್ರಾರ್ಥಿಸುತ್ತದೆ. ನಮಗ ದೇವ್ರು ಕುಡಿಯಾಕ ಬಿಸ್ಲರಿ ನೀರು ಕೊಟ್ರೂ, ಜಾತಕ ಪಕ್ಷಿಯ ಗುಣ ರಕ್ತದಲ್ಲಿ ಕುಳಿತು ಬಿಟ್ಟಿದೆ. ಮಳೆಯ ನೀರು ಮಾತ್ರ ನನ್ನ ತನು ಮನದ ದಾಹವನ್ನು ತಣಿಸಬಲ್ಲದು. ಬೇಸಿಗೆಯಲ್ಲಿ ಒಂದು ಪ್ರವಾಸ ಮಾಡಿದ್ದೆ, ಆದ್ರೆ ತೃಪ್ತಿ ಸಿಕ್ಕಿರಲಿಲ್ಲ, ಯಾಕಂದ್ರೆ ಆಗ ಮಂಡೆ ಮೇಲೆ ಮೋಡ ನೋಡಿರಲಿಲ್ಲ. 

ಹಂಗೆ ಏನ್ ಮಾಡ್ಪ ಅಂತ ಯೋಚನೆ ಮಾಡ್ತಾ ಇರುವಾಗ, ಬೆಂಗಳೂರು ಚಾರಣಿಗರ ಸಂಘದಿಂದ  (www.bangaloreascenders.orgಆಹ್ವಾನ ಬಂತು. "ಪಶ್ಚಿಮ ಘಟ್ಟದಲ್ಲಿ ಮುಂಗಾರು ಮಳೆಯ ಪ್ರಥಮ ಚುಂಬನ ಪಡೆಯುವ ಸುಂದರ ಅವಕಾಶ'. ರಜ ಸಿಗತ್ತೋ ಇಲ್ವೋ ಗೊತ್ತಿರಲಿಲ್ಲ, ಆದ್ರೂ ಕಲ್ ಹೊಡೆದೇ ಬಿಡುವ ಅಂತ ಹೆಸರು ನೊಂದಾಯಿಸಿದೆ. ಆದ್ರೆ ಈ ಸಲ ಫುಲ್ ಹೊಸ ಜನ, ಆದ್ದರಿಂದ ಸ್ವಲ್ಪ ಅಳುಕಿತ್ತು. ಪಲ್ಲವಿ ಅಂತ ಆಯೋಜಕರ ಹೆಸ್ರು, ನಾಮದೇಯ ಕೇಳಿದ್ದೆ, ವ್ಯಕ್ತಿ ಪರಿಚಯ ಇರಲಿಲ್ಲ. 

ಹಿಂದಿನ ದಿನವೇ ನಮ್ಮ ನೆಚ್ಚಿನ ಹಜಾಮರ ಅಲ್ಲಲ್ಲ, ನಿಜಾಮರ ಊರು ಬಿಟ್ಟು ಕೆಂಪೇಗೌಡರ ರಾಜ್ಯಕ್ಕೆ ಕಾಲಿಟ್ಟೆ. ಒಂದೇ ಸಲ 47° ಡಿಗ್ರಿ ಇಂದ 23°ಗೆ ಬಂದಾಗ ಬರಬಾರದ ಯೋಚನೆ ಎಲ್ಲ ತಲೆಗೆ ಬರತ್ತೆ. ಆದ್ರೆ ನಮ್ದು ಒಳ್ಳೆ ಗುಣ, ಎಲ್ಲಾ  ಯೋಚನೆಗಳನ್ನು ಕಾರ್ಯರೂಪಕ್ಕೆ ತರಲ್ಲ. 


ಸಿಕ್ಕಾಪಟ್ಟೆ ಕಾಡುವ ಏಕಾಂತಕ್ಕೆ ನಾನು ಕಂಡುಕೊಂಡಿರುವ ಏಕೈಕ ಊಪಾಯ ಚಾರಣ. ಪ್ರತಿ ಬಾರಿಯೂ ಚಾರಣದಿಂದ ವಾಪಸ್ ಬಂದಾಗ ಹೊಸ ಮನುಷ್ಯ ಆಗಿರ್ತೇನೆ. 4 ದಿನ ಸಮಾಧಾನ ಸಿಗತ್ತೆ. ರಾತ್ರಿ  ಹೊರಡುವ ಸಮಯಕ್ಕೆ ಕಾಯ್ತಾ ಇದ್ದೆ. ಆಯೋಜಕರು 10 ಗಂಟೆಗೆ ಬರದೇ ಇದ್ರೆ ಬಿಟ್ಟು ಹೋಗ್ತೀನಿ ಅಂಥ ದಮ್ಕಿ ಹಾಕಿದ್ರು. ನಮ್ ರಕ್ತದಲ್ಲಿ ಸ್ವಲ್ಪ ಶಿಸ್ತು ಜಾಸ್ತಿ. 9 ಗಂಟೆಗೇ ಅಲ್ಲಿ ಹೋಗಿಬಿಡೋಣ ಅಂತ ಬೇಗ ಹೊರಟೆ. ಮರುಭೂಮಿಯಿಂದ ಬಂದ ಹುಡುಗ ಅಂತ, ಮಳೆ ಸ್ವಲ್ಪ ಜಾಸ್ತಿ ಪ್ರೀತಿ ತೋರಿ ಬೆಂಗಳೂರಿನಲ್ಲಿ ಪ್ರವಾಹ ಸ್ವರೂಪ ಪಡೆದಿತ್ತು. ನಮ್ಮ BMTC ಬಸ್ ಕೈ ಕೊಡ್ತು. ಹೆಂಗೋ ಕಷ್ಟ ಪಟ್ಟು ನೀರಿನಲ್ಲಿ ಈಜಿಕೊಂಡು ಶಾಂತಲ ಸಿಲ್ಕ್ ಹೌಸ್ ತಲುಪುವಾಗ ಸರಿಯಾಗಿ 10 ಗಂಟೆ. ಅಲ್ಲಿದ್ದದ್ದು ನಾನು ಮತ್ತು ರಾಮ್.ಉಳಿದ ಸಹ ಚಾರಣಿಗರು ಲೇಟು. 'ಪ್ರಕೃತಿ' ದಮ್ಕಿ ಹಾಕಿದ ಆಯೋಜಕರನ್ನು ಯಾವುದೋ ರಸ್ತೆಯಲ್ಲಿ ಕಟ್ಟಿ ಕೂರಿಸಿತ್ತು. 

ಎಲ್ಲ ಬಂದು ಗಾಡಿ ಬಿಡುವಾಗ 12 ಗಂಟೆ. ಬಸ್ ಬೆಂಗಳೂರು ಬಿಡುವಾಗ ಮತ್ತೆರಡು ಗಂಟೆ ಕಳೆದು ಹೋಗಿತ್ತು. ಆಯೋಜಕರು (ಪಲ್ಲವಿ) ಮನೆಯಿಂದ ಪಲಾವ್ ಮಾಡಿಕೊಂಡು ಬಂದು ಇಬ್ಬರಿಗೆ ತಿನ್ನಿಸಿ ಅವರ ಹೊಟ್ಟೆಯನ್ನು ಕೆಡಿಸಿದ್ದರು. ಆಮೇಲೆ ಪರಿಚಯ ಕಾರ್ಯಕ್ರಮ ಶುರು. ನೆರೆದಿರುವ ಜನಗಳ ಬಗ್ಗೆ ಗೊತ್ತಾಗಬಾರದ ವಿಚಾರಗಳೆಲ್ಲ ಗೊತ್ತಾದವು. 

ಕೊನೆಗೆ ಎಲ್ಲರು ನಿದ್ದೆ ಹೋಗುವ ಕಾರ್ಯಕ್ರಮ. ನನ್ನ ಕಣ್ಣು ನಿದ್ದೆ ಮಾಡಕ್ಕೆ ಒಪ್ಪಲಿಲ್ಲ. ರಾತ್ರಿ ಹೊತ್ತು ವಾಹನದ ಕಿಟಕಿಯಿಂದ ಮುಂಗಾರು ಮಳೆಯ ಸವಿಯುವ ಅನುಭವ ಪ್ರಪಂಚದ ಯಾವುದೇ ಸುಖಕ್ಕೂ ಕಡಿಮೆ ಇಲ್ಲ. ರಾತ್ರಿ ಇಡೀ ಚಾಲಕನ ಪಕ್ಕ ಕುಳಿತು ಮುಂಗಾರು ಮಳೆಯ ಹನಿಗಳ ಲೀಲೆ ನೋಡ್ತಾ ಕಾಲ ಕಳೆದೆ. 



ಚಿತ್ರ ಕೃಪೆ : ಗಿರೀಶ್ 
ಬೆಳಿಗ್ಗೆ 5.30ಕ್ಕೆ ಸಕಲೇಶಪುರ ತಲುಪಿ , ಅಲ್ಲಿ ಬೆಳ್ ಬೆಳಿಗ್ಗೆ ತೆಗೆದಿರುವ ಏಕೈಕ ಹೋಟೆಲ್ನಲ್ಲಿ ಇಡ್ಲಿ ಮತ್ತು ರೈಸ್ ಬಾತ್ ಕಟ್ಟಿಸಿಕೊಂಡು ಪಯಣವನ್ನು ಮುಂದುವರಿಸಿದೆವು. ನನ್ನ ಕೆಲಸ ಮಾಕನಮನೆ ಜಲಪಾತ ತೋರಿಸುವುದಾಗಿತ್ತು. ಸುಮಾರು 5 ವರ್ಷದ ಹಿಂದೆ ಅಲ್ಲಿಗೆ ಕಾಲಿಟ್ಟಿದ್ದೆ. ನಮ್ದು ಮೊದ್ಲೇ ಶಾರ್ಟ್ ಟರ್ಮ್ ಮೆಮೋರಿ. ನೆನ್ನೆ ನೋಡಿದ ಡರ್ಟಿ ಪಿಕ್ಚರ್ ಸೀನೇ ನೆನಪಿರಲ್ಲ. ಈ ಜಾಗ ನೆನಪಿರತ್ತಾ? ಸೊ ಸುತ್ತಾಕಿ ಸುತ್ತಾಕಿ ಒಂದು ಕಡೆ ಬಸ್ ನಿಲ್ಲಿಸಿ ಜಲಪಾತ ಹುಡುಕುವ ಕಾರ್ಯ ಶುರು ಹಚ್ಚ್ಕೊಂಡ್ವಿ. ಎಲ್ಲೂ ಜಲಪಾತದ ಸುಳಿವಿರಲಿಲ್ಲ. ಜಲಪಾತ ಹೋಗ್ಲಿ ಜಲಪಾತ ಇರುವ  ಸ್ಥಳದ ಲಕ್ಷಣವೂ ಅಲ್ಲಿ ಇರಲಿಲ್ಲ. ನಾನು ಎರಡೂ ದಿಕ್ಕಿನಲ್ಲಿ ಕೆಲವು ಕಿಲೋಮೀಟರು ಕ್ರಮಿಸಿ ಹುಡುಕಿದರೂ ಮಾಕನಮನೆ ಸಿಗಲಿಲ್ಲ. ಕೊನೆಗೆ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಕಡಿದಾದ ಗುಡ್ಡ ಇಳಿದು ನೀರು ಹರಿಯುವ ಪ್ರದೇಶ ತಲುಪಿ ತಂದ ತಿಂಡಿಯನ್ನು ಹೊಟ್ಟೆಗೆ ಸೇರಿಸಿ ಅಲ್ಲಿಂದ ಕಾಲ್ಕಿತ್ತೆವು.  ಹಾದಿಯಲ್ಲಿ ಯಾವುದೋ ಜನರಿಲ್ಲದ ಮನೆಯ ಸುತ್ತ ಬೆಳೆದಿದ್ದ ಅನಾನಸ್ ಹಣ್ಣಿನ ಪ್ರಾಣ ತೆಗೆದು ಬಲಿ ಕೊಟ್ಟು ಹೊಟ್ಟೆ ಪೂಜೆ ನಡೆಸಿದ್ದ್ವಿ.  



ಚಿತ್ರ ಕೃಪೆ : ಪಲ್ಲವಿ 
ಅಲ್ಲಿಂದ ವಾಪಸ್ ಬರುವಾಗ ಒಂದು ದಾರಿದೀಪ (ಹಳ್ಳಿಗ) ಸಿಕ್ಕು ಸರಿಯಾದ ದಾರಿ ತೋರಿಸಿದರು. ನಾನು 5 ವರ್ಷದ ಹಿಂದೆ ಇಲ್ಲಿಗೆ ಬಂದಾಗ ಇದು ಸುಂದರವಾದ ಅಜ್ಞಾತ ಸ್ಥಳ ಮನುಜ ರಹಿತ ಪ್ರಕೃತಿ ಸಹಿತ ಸುಂದರ ಜಾಗ. ಈ ಸಲ ಹೋದವನಿಗೆ ಸಿಕ್ಕಾಪಟ್ಟೆ ಬೇಸರವಾಯಿತು . ಮಲ್ಯನ ಬಾಟ್ಲು ಎಲ್ಲಾ ಕಡೆ ಬಿದ್ದಿತ್ತು. ಕಾಡಿರುವ ಜಾಗದಲ್ಲಿ ರೆಸಾರ್ಟ್, ನಗರದ ಬೇವರ್ಸಿಗಳು ಇಲ್ಲೂ ಬಂದು ತಮ್ಮ ಕೀಳು ಸಂಸ್ಕ್ರತಿಯನ್ನು ತೋರಿಸಿದ್ದರು. ಗುಂಪಿನಲ್ಲಿ ಯಾರಿಗೂ  ಸ್ಥಳ ಇಷ್ಟವಾದ ಹಾಗೆ ಕಾಣಲಿಲ್ಲ. ಹಾಗೆಯೇ ನೀರು ಸಹಾ ಸಿಕ್ಕಾಪಟ್ಟೆ ಕಡಿಮೆಯಿತ್ತು. ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ..... 






ಚಿತ್ರ ಕೃಪೆ : ಗಿರೀಶ್ 
ಆಮೇಕೆ ಕಾಗಿನಹಾರೆಯ ಕಡೆಗೆ ಎಮ್ಮ ಪಯಣ. ಅಲ್ಲಿ ಯಕ್ಕಾಚಿಕ್ಕಿ ಚಪಾತಿ ತಿಂದು ನೀರು ಕುಡಿದು ನಮ್ಮ ಮೊದಲ ಗುರಿಯಾದ ಕಾಗಿನಹಾರೆಯ  ೋಟೆಯ ಕಡೆ ಚಿತ್ತ ಹರಿಸಿದೆವು. ಸಂಪೂರ್ಣ ಮಂಜಿನಿಂದ ಕೂಡಿದ ವಾತಾವರಣ, ಕೋಟೆ ಯಾವ ಕಡೆ ಇದೆ ಎಂದು ಗೋಚರಿಸಲಿಲ್ಲ. ಆದ್ರು ಹಾಗೆಯೇ ಮುಂದೆ ಪಯಣಿಸಿ ಕಾಗಿನಹಾರೆ ೌಡೇಶ್ವರಿ ದೇವಾಲಯದವರೆಗೆ ನಡೆದು, ಒಂದು ಮಕ್ಕೊಂಡಿದ್ದ ಹಾವನ್ನು ಎಚ್ಚರಿಸಿ :), ಮತ್ತೆ ಊರಿನ ಕಡೆಗೆ ಗಾಡಿ ಬಿಟ್ಟೆವು. ದಾರಿಯಲ್ಲಿ ಕೋಟೆ ಗೋಚರಿಸಿತು, ಕೋಟೆಯ ತಳಪಾಯ ಮಾತ್ರ ಉಳಿದುಕೊಂಡಿದ್ದು, ಉಳಿದವು ಕಾಲಚಕ್ರದ ಚಲನೆಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿವೆ. ಆದರೆ ಕೋಟೆಯು ಒಂದು ಎತ್ತರವಾದ ಪರ್ವತದ ಮೇಲಿದ್ದು ಅಲ್ಲಿಂದ ಸುತ್ತಲಿನ ಅದ್ಭುತ ಚಿತ್ರಣವು ಕಾಣಿಸುತ್ತದೆ. ಮಂಜು ಮುಸುಕಿದ್ದರಿಂದ ನಮಗೆ ಆ ಚಿತ್ರಣವು ಲಭ್ಯವಾಗಲಿಲ್ಲ. 

ಕಾಗಿನೆರೆ ಗ್ರಾಮದಲ್ಲಿ ಶಿರಾಡಿ ಚಾಮುಂಡೇಶ್ವರಿ ದೇವಾಲಯವಿದ್ದು, ಹತ್ತಿರವಿರುವ ಅನೇಕ ಗ್ರಾಮಗಳಿಂದ ಭಕ್ತಾದಿಗಳು
ಚಿತ್ರ ಕೃಪೆ : ಪಲ್ಲವಿ 
ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿಗೆ ಬರುವ ಭಕ್ತಾದಿಗಳಿಗೆ ವಸತಿ ವ್ಯವಸ್ಥೆಯಿದ್ದು , ನಮಗೂ ಹಳೆ ಜನ್ಮದ ಪುಣ್ಯದಿಂದ ಅಲ್ಲಿ ಉಳಿಯುವುದ್ದಕ್ಕೆ ಜಾಗ ಸಿಕ್ಕಿತು. ಸೂಪರ್ ಟೀ, ನಿಯಮಿತ ಬೋಂಡ ಹಾಗು ಉತ್ತಮ ಊಟ ದೊರೆತು, ನಾವು ತಂದ ತಿಂಡಿಗಳು ಬ್ಯಾಗ್ನಲ್ಲಿ ಉಳಿಯಿತು. ಸಂಜೆ ಮಾಡಲು ಕೆಲಸವಿಲ್ಲದ ಕಾರಣ ಎಲ್ಲರೂ ಹರಟೆಯಲ್ಲಿ ತೊಡಗಿದರು. ಡಬಲ್ ಮೀನಿಂಗ್ ಡೈಲಾಗುಗಳು ಭರ್ಜರಿ ಮನರಂಜನೆಯನ್ನು ಒದಗಿಸಿದವು. ಪಲ್ಲವಿ ಬೆಂಗಳೂರಿನಿಂದ ಬರೆದುಕೊಂಡು ಬಂದ ಚೀಟಿಗಳು (dumb charade  ಆಡಿಸಕ್ಕೆ), ಗಲಾಟೆ ಮಾಡಲಿಕ್ಕೆ ಅನುಮತಿ ಸಿಗದ ಕಾರಣ ವ್ಯರ್ಥವಾಯಿತು. ಎಲ್ಲಾ ಹುಡುಗರಿಗೂ ಇದರಿಂದ ಸ್ವಲ್ಪ ಸಮಾಧಾನ :) 

ಚಿತ್ರ ಕೃಪೆ : ಶ್ರೀವತ್ಸ
ಚಿತ್ರ ಕೃಪೆ : ಶ್ರೀವತ್ಸ
ಚಿತ್ರ ಕೃಪೆ : ಶ್ರೀವತ್ಸ 
ಚಿತ್ರ ಕೃಪೆ : ಪಲ್ಲವಿ 



ರಾತ್ರಿ ಊಟ ಮುಗಿಸಿ ಮಲಗಿಕೊಳ್ಳುವ ವೇಳೆಗೆ 100ಕ್ಕೂ ಅಧಿಕ ಭಕ್ತಾದಿಗಳ ಆಗಮನ. ಎಲ್ಲಾ ಬೀಡಿ ಪ್ರಿಯರು. ಶುದ್ಧ ಗಾಳಿ ಸೇವಿಸೋಣ ಅಂತ ಾಡಿಗೆ ಹೋದ್ರೆ ಅಲ್ಲೂ ಲೋಕಲ್ ಬೀಡಿ ಹೊಗೆ. ರಾತ್ರಿ ಇಡೀ ಅವರ ಗಲಾಟೆ. ಬೆಳಿಗ್ಗೆ ಬೇಗ ಎದ್ದ ಕೆಲವು ಉತ್ಸಾಹಿ ತರುಣರು ಮತ್ತೆ ಕೋಟೆ ಕಡೆ ಧಾವಿಸಿದೆವು. ಇನ್ನು ಕೆಲವು ನಿರುತ್ಸಾಹಿ ತರುಣ ಪ್ಲಸ್ ತರುಣಿಯರು ದಬ್ಹಾಕ್ಕೊಂಡ್ ಮಲ್ಕೊಂಡಿದ್ರು.







ಆಮೇಕೆ, ಕೋಟೆ ನೋಡಿ, ಇಲ್ಲದ ರಾಜ ರಾಣಿನ ಮಾತಾಡಿಸಿ ಹೊರಡಲು ಅನುವಾದೆವು. ಈ ದಿನದ ದಾರಿ "ಮಂಜು ಮುಸುಕಿದ ಹಾದಿಯಲ್ಲ', ಫುಲ್ಲು "ರಕ್ತ ಪಿಪಾಸುಗಳು ಹುದುಗಿದ ಹಾದಿ'. ಕೆಲವರು 'Flipkart' ಪಾರ್ಸಲ್ ಮಾಡೋ ರೀತಿ ತಮ್ಮ ಕಾಲನ್ನು ಪ್ಯಾಕ್ ಮಾಡ್ಕೊಂಡ್ವು. ಇಂಬಳಗಳು ನೋವುರಹಿತವಾಗಿ ರಕ್ತ ಹಿಂಡಿದರೂ , ಜನಕ್ಕೆ ಅದರ ಬಗ್ಗೆ ದ್ವೇಷ.  

ಅಲ್ಲಿಂದ ಹೊರಟು ಒಂದು ಸಣ್ಣ ಫೋಟೋಗ್ರಫಿ ಸೆಶನ್ ಮುಗಿಸ್ಕೊಂಡು ಹೊರಟರೆ ಒಂದು ಪೇರಲೆಕಾಯಿ (ಸೀಬೇಕಾಯಿ) ಮರ ಎದುರಾಯಿತು. ಗಂಡು ಮಕ್ಳು ಮರ ಹತ್ತಿ ಡೀಸೆಂಟ್ ಆಗಿ ಹಣ್ಣು ತಿಂದ್ರೆ, ಹೆಣ್ಣು ಮಕ್ಳು ಹೊಡೆದಾಟ ಮಾಡಕೊಂಡ್ವು. ಇದ್ 2 ಜಡೆಗಳಲ್ಲೇ ಈ ಪರಿಯ ಹೊಡೆದಾಟ. ಇನ್ನೇನಾದ್ರು 8-10 ಜನ ಇದ್ರೆ ದೇವ್ರೇ ಗತಿ. ಮಿಲಿಟರಿ ಕರಿಸ್ಬೇಕಾಗಿತ್ತು ಆಮೇಲೆ. 
    
ಆಮೇಲೆ ಒಂದ್ ಲೆಫ್ಟ್ ತಗೊಂಡ್ ನೇರ ಓಯ್ತಾ ಇದ್ವಿ.ಸಡನ್ ಆಗಿ 'ಹೀಗೂ ಉಂಟೆ' ರೇಂಜ್ ಅಲ್ಲಿ ಫುಲ್ ಎಲ್ಲಾ ಪರ್ವತ ಪ್ರದೇಶಗಳು ಒಂದೇ ಬಾರಿಗೆ ಕಾಣುವ ಪ್ರದೇಶ' ಎದುರಾಯಿತು. ಜಾಸ್ತಿ ಕಷ್ಟ ಪಡದೆ ಪೀಕ್ ತಲುಪಿದ್ವಿ. ರೈಲು ಹಳಿಗಳನ್ನು ಸಹ ಇಲ್ಲಿಂದ ವಿಕ್ಷಿಸಬಹುದಿತ್ತು. ನಂತರ ಇಳಿಯೋ ಪ್ರೊಗ್ರಾಮ್. ದಾರಿಯ ಮಧ್ಯ 'ಮೊಸ್ರು ಬಾಯ್ಸ್' ತಂಡದಿಂದ ನ ನೃತ್ಯ ಕಾರ್ಯಕ್ರಮ ಇತ್ತು. ಆ ಡಾನ್ಸ್ ಬಗ್ಗೆ ಪಲ್ಲವಿ ಕಾಮೆಂಟ್ 'ನಾ ಎಂದೂ ಮರೆಯಲಾರೆ' "that  was 'ನಿಧಾನ ಮಾಡ್ರೋ. ಇಲ್ಲಾ ಅಂದ್ರೆ ಮೊಸ್ರು .............. 

ಅಲ್ಲಿಂದ ಶುರುವಾಯಿತು ದಟ್ಟ ಕಾನನ. wholesale ಇಂಬಳಗಳು. ಸುಮಾರು 2 ಗಂಟೆ ಘಟ್ಟ ಇಳಿದು ರೈಲ್ವೆ ಹಳಿಯನ್ನು ತಲುಪಿದೆವು.  ಅಲ್ಲಿ ಇಂಬಳ ತಗೆದು ಬಿಸಾಕಿ ಅರ್ಧ ಗಂಟೆಯ ನಡಿಗೆಯಲ್ಲಿ ಯಡಕುಮರಿ ಸ್ಟೇಷನ್ ತಲುಪಿದೆವು. ಅಲ್ಲಿ ಹೋಳಿಗೆ ತಿಂದು ಮೆಲುಕಿ ಹಾಕಿ, ನಂತರ ಆನೆ ಲದ್ದಿ ತುಂಬಿದ ಕಾನನದೊಳಕ್ಕೆ ಪ್ರವೇಶಿದೆವು. ನಮ್ಮ ಗುರಿ ಅಲ್ಲಿಂದ ಕೆಳಗಿಳಿದು ಕೆಂಪು ಹೊಳೆಯನ್ನು ದಾಟಿ ಮುಖ್ಯ ರಸ್ತೆಯನ್ನು ಮುಟ್ಟುವುದಾಗಿತ್ತು. ಬಿದಿರು ತುಂಬಿದ ಕಾಡಿನಲ್ಲಿ ನಮ್ಮ ಬರುವಿಕೆಯನ್ನು ಕಾದು ಕುಳಿತಿದ್ದ ಇಂಬಳದ ಸೈನ್ಯ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಪ್ರತಿಯೊಬ್ಬ ನಾಗರಿಕನಿಗೂ 50-100 ಸೈನಿಕರು ಮುತ್ತಿಗೆ ಹಾಕತೊಡಗಿದ್ದರು. ಮೊದಲ ಬಾರಿಗೆ ಮುಂಗಾರು ಮಳೆಯ ಆನಂದವೂ ಲಭ್ಯವಾಗಿತ್ತು. 

ಕೆಲವೇ ಗಂಟೆಗಳಲ್ಲಿ ಕೆಂಪು ಹೊಳೆ ತಲುಪಿದ್ದೆವು.  ಈ ಹೊಳೆ ಹಾನುಬಾಳಿನ ಎತ್ತಿನಹಳ್ಳ ದೇವಾಲಯದ ಕೆರೆ ಅಗನಿ ಸಮೀಪ ಹುಟ್ಟಿ, ಹಾರ್ಲೆ ಮುಖಾಂತರ ಹರಿದು,  ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿಗೆ ಸೇರುತ್ತದೆ. ಇದು ಭತ್ತ ಮತ್ತು ಕಾಫಿ ಬೆಳೆಯುವವರಿಗೆ ಹೆಚ್ಚು ಉಪಯೋಗ ವಾಗಿದ್ದು, ಕೃಷಿಕರಿಗೆ ಸಂಜೀವಿನಿಯಾಗಿದೆ.  ಗಿರೀಶ್ ಅವರು ಮೊದಲು ನದಿ ದಾಟುವ ಪ್ರಯತ್ನ ಮಾಡಿ ಯಶಸ್ವಿಯಾದ ಮೇಲೆ ನಾವು ಅವರನ್ನು ಅನುಕರಿಸಿದೆವು.          

ಚಿತ್ರ ಕೃಪೆ : ಪಲ್ಲವಿ

ನಮ್ಮ ಬಸ್ ಆ ಸ್ಥಳಕ್ಕೆ ಬರದೆ ಇದ್ದ ಕಾರಣ ಸ್ವಲ್ಪ ದೂರ ನಡೆಯಬೇಕಾಯಿತು. ಯಾರ ಮಂಡೆಗೆ ಬಂದ ಸುಯೋಚನೆಯೂ ಗೊತ್ತಿಲ್ಲ. ಬಾಟ್ಲೀಲಿ ಇದ್ದ ನೀರನ್ನು ಸಂಗ್ರಹಿಸಿ ನಿಂಬೆ ಹಣ್ಣನ್ನುಹಿಂಡಿ ಸಕ್ಕರೆ ಸೇರಿಸಿ ಪಾನಕ ಮಾಡಿದರು. ಸುರಾಸುರರು ಅಮೃತಕ್ಕಾಗಿ ನಡೆಸಿದ ಹೋರಾಟ ಅಲ್ಲಿ ದೃಶ್ಯ ತಳೆದಿತ್ತು. ಮುಂದೆ ದಾರಿಯಲ್ಲಿ ಟೀ ಸೇವಿಸಿ, ಉಜಿರೆಯ ಕಡೆ ಪಯಣ. ನಂತರ ಜನದಟ್ಟಣೆಯ ನಡುವೆಯಿದ್ದರೂ ಇನ್ನೂ ಸೌಂದರ್ಯ ಕಾಪಾಡಿಕೊಂಡಿರುವ  ಇರ್ಮಾಯಿ ಜಲಪಾತ ತಲುಪಿ ಬಹಳ ಅಗತ್ಯವಾಗಿದ್ದ ಸ್ನಾನವನ್ನು ಮುಗಿಸಿದೆವು. ನಂತರದ ಕಾರ್ಯ ಧರ್ಮಸ್ಥಳ ಮಂಜುನಾಥನ ದರ್ಶನ. ಸುಮಾರು 2 ವರ್ಷವಾಗಿತ್ತು  ನಾನು  ಮತ್ತು ಈ ದೇವ್ರು ಮೀಟ್ ಆಗಿ. ಸುಮಾರು ಬಾರಿ ಸುಬ್ರಮಣ್ಯಕ್ಕೆ ಕಾಲಿಟ್ಟರೂ ಇಲ್ಲ್ಲಿಗೆ ಬರಲಾಗಿರಲಿಲ್ಲ. ಅಲ್ಪ ಕಾಲದಲ್ಲಿ (ಸುಮಾರು ಒಂದು ಗಂಟೆ) ದರ್ಶನ ಮುಗಿಸಿ ಪ್ರಸಾದವನ್ನು ಸ್ವೀಕರಿಸಿ ಅಲ್ಲಿಂದ ಹೊರಟೆವು. 

ಬೆಂಗಳೂರಿಗೆ ತಲುಪುವಾಗ ಸುಮಾರು ಬೆಳಿಗ್ಗೆ 7 ಗಂಟೆಯಾಗಿತ್ತು. ನನ್ನಯ ಪ್ರೀತಿಯ ಆಫೀಸ್ ಕೆಲಸ ನನಗೆ ಶಬರಿ ಟೈಪ್ ನಲ್ಲಿ ಕಾಯ್ತಾ ಇತ್ತು. ಎಲ್ಲಾ ಚಾರಣ ಮಿತ್ರರಿಗೆ ಕೈ ಕೊಟ್ಟು (ವಿದಾಯ ಹೇಳಿ) ಮನೆಯ ಕಡೆಗೆ ಹೆಜ್ಜೆ ಹಾಕುವಾಗ ಮನಸ್ಸುಹಾಡನ್ನು ಗುನುಗುತ್ತಿತ್ತು.  

ಎಷ್ಟೊಂದ್ ಜನ ಇಲ್ಲಿ ಯಾರು ನಮ್ಮೋರು .... ಎಷ್ಟೊಂದ್ ಮನೆ ಇಲ್ಲಿ ಎಲ್ಲಿ ನಮ್ ಮನೆ ... ಎಲ್ಲಿ ಎಲ್ಲಿ ಎಲ್ಲಿ ನಮ್ ಮನೆ ..
ಎಷ್ಟೊಂದ್ ಹಕ್ಕಿ, ಇಲ್ಲಿ ಯಾವ್ದು ನನ್ ಹಕ್ಕಿ. 

ನಿಮ್ಮಯ 
ಸದಾಶಿವ ಬಾಯರಿ 




Sunday 7 October 2012


ಕುದುರೆಮುಖ ಚಾರಣ - ಈ ಸಂವತ್ಸರದ ಕೊನೆಯ ಮಳೆ ಚಾರಣ 

ಕರ್ಣಾಟಕದ ಸಹ್ಯಾದ್ರಿ ಪರ್ವತಗಳ ಸಾಲಿನಲ್ಲಿ ವಿಭಿನ್ನವಾದ ಪರ್ವತ ಶ್ರೇಣಿ ಈ ಕುದುರೆ ಮುಖದ ಪರ್ವತ ಸಾಲುಗಳು. ಎಲ್ಲಿ ಕಣ್ಣು ಹಾಯಿಸಿದರೂ ಬೋಳು ಬೋಳಾದ ಪರ್ವತಗಳು ಕಾಣ ಸಿಗುವ ಪ್ರದೇಶವಿದು. ನಡೆದು ಸಾಗುವ ಪ್ರದೇಶದಲ್ಲಿ ಅನೇಕ ಗಿರಿ ಕಂದಕಗಳು, ಹಳ್ಳ, ನದಿ ತೊರೆಗಳು ಇದ್ದು, ಚಾರಣಕ್ಕೆ ಮುದ ನೀಡುತ್ತವೆ. 

ಕೊನೆಯ ಮಳೆಗಾಲದಲ್ಲಿ ನನ್ನ ಸಹ ಮಿತ್ರರೊಂದಿಗೆ ಇಲ್ಲಿಗೆ ಪ್ರಯಾಣ ಕೈಗೊಂಡಿದ್ದೆ. ಭಗವತಿ ನಿಸರ್ಗ ಬಿಡಾರದಿಂದ ಚಾರಣ ಮಾಡುವ ನಮ್ಮ ಪ್ರಯತ್ನಕ್ಕೆ ಎಡೆ ಬಿಡದೆ ಸುರಿದ ಮಳೆ ಇಥಿಶ್ರಿ ಹಾಡಿತು. ಹಾಗೆ ಸುಮ್ಮನೆ ಸುಂದರ ವಾತವರಣದಲ್ಲಿ ಸುತ್ತಿ, ಸುಂದರ ಅನುಭಗಳೊಂದಿಗೆ ಮರಳಬೇಕಾಯಿತು. ಈ ಬಾರಿ ಬೆಂಗಳೂರು ಅಸೆಂಡ್ ರ್ಸ್ ಕಡೆಯಿಂದ ಬಂದ ಆಹ್ವಾನವನ್ನು ಉಪಯೋಗಿಸಿಕೊಂಡು ಹೊರಟೆ. ಚಾರಣದ ನೇತ್ರತ್ವ  ವಹಿಸಿದ್ದವರು ಕಾರ್ತಿಕ್ ಅದ್ದರಿಂದ ಪರ್ವತದ ತುತ್ತ ತುದಿ ಹತ್ತುವ ಖಾತ್ರಿಯಿತ್ತು (ಕೊನೆಯ ಬಾರಿ ಇವರ ಮುಂದಾಳತ್ವದಲ್ಲಿ ಕುಮಾರ ಪರ್ವತ ಚಾರಣದಲ್ಲಿ ಭಾಗವಹಿಸಿದ್ದೆ). 


ಸರಿ, ನಿಜಾಮರ ನಗರಿಯಿಂದ ಓಡೋಡಿ ಬಂದು ಶುಕ್ರವಾರ ಬೆಂಗಳೂರಿಗೆ ಎಡತಾಕಿದ್ದೆ. ರಾತ್ರಿ ೧೦.೩೦ ರ ಸುಮಾರಿಗೆ ಶಾಂತಲ ಸೀರೆ ಅಂಗಡಿಯ ಸನಿಹದಿಂದ ನಮ್ಮ ಪ್ರಯಾಣ ಆರಂಭ. ರಾತ್ರಿ ಯಾಕೋ ಕಣ್ಣಿಗೆ ನಿದ್ರೆ ಹತ್ತಿರಲಿಲ್ಲ, ಕೊಟ್ಟಿಗೆಹಾರದಲ್ಲಿ ನೀರು ದೋಸೆ ತಿನ್ನುವ ಚಪಲ ತಲೆಯಲ್ಲಿ ಕುಣಿದಾಡುತಿತ್ತು.  ತಾನೊಂದು ಬಗೆದರೆ 
ವಿಧಿಯೊಂದು .... ಕೊಟ್ಟಿಗೆಹಾರದಲ್ಲಿ ಸರಿಯಾಗಿ ಜೋಂಪು ಹತ್ತಿ ದೋಸೆ ನನ್ನಿಂದ ಮಿಸ್ ಆಯ್ತು. ಬೆಳಿಗ್ಗೆ ೬.೩೦ ರ ಸುಮಾರಿಗೆ ಕಳಸ ತಲುಪಿದೆವು. ನಿತ್ಯ ಕರ್ಮ ಪೂರೈಸಿದ ನಂತರ ತಿಂಡಿ ಕಾಫಿಯ ಸಮಯ. ಇಡ್ಲಿ ಬನ್ಸ್ ಪೂರಿಗಳ ಸಮಾಗಮ. ನಂತರ ಪರ್ವತದತ್ತ ಪಯಣ. ಒಂದು ಹಳ್ಳಿಯನ್ನು ತಲುಪಿ. ಅಲ್ಲಿಂದ ಗುಡ್ಡ ಬೆಟ್ಟಗಳ ಮೇಲೆ ಓಡುವ ಏಕಮಾತ್ರ ವಾಹನ,  "ಮಹಿಂದ್ರ ಜೀಪ್" ಏರಿ ಸತೀಶ್ ಅವರ ಮನೆಯ ದಾರಿ ಹಿಡಿದೆವು. ಸುಮಾರು ೭ ಕಿಲೋ ಮೀಟರ್ ಗಳ ಸಾಹಸ. ದಾರಿಯುದ್ದಕ್ಕೂ ಕಣ್ಮನ ಸೆಳೆಯುವ ನೋಟಗಳು - ಕಾಫಿ ತೋಟಗಳು, ಶುದ್ದ ನೀರ ಜಲಧಾರೆಗಳು, ಮನುಷ್ಯ ನಿರ್ಮಿತ ಸಣ್ಣ ನೀರಿನ ಒಡ್ಡುಗಳು, ದೂರದಲ್ಲಿ ಕಾಣುವ ಹಸಿರು ಪರ್ವತಗಳು, ಶುದ್ದ ಮನಸಿನ ಜನರಿಂದ ಕಟ್ಟಲ್ಪಟ್ಟ ಸುಂದರವಾದ ಮನೆಗಳು..
ಅರ್ಧ ಗಂಟೆಯ ಜೀಪ್ ಪಯಣದ ನಂತರ ಸತೀಶ್ ಮನೆ ಎದುರಾಯಿತು. ನಿಂಬೆ ಪಾನಕವನ್ನು ಏರಿಸಿ, ಬುತ್ತಿಯನ್ನು ಕಟ್ಟಿಕೊಂಡು ಸುಮಾರು ೧೨ ರ ವೇಳೆಗೆ ಚಾರಣದ ಆರಂಭ. ಒಟ್ಟು ೧೧ ಚಾರಣಿಗರು, ಮಂಡೆ ಮೇಲೆ ಸೂರ್ಯ, ವಾಯು ದೇವನಿಂದ ತಂಪಾದ ಗಾಳಿ, ಅಲ್ಲಲ್ಲಿ ಹರಿಯುವ ನೀರಿನ ತೋಡುಗಳು ನಮಗೆ 
ಆಯಾಸವಾಗದಿರಲು ಪ್ರಕೃತಿ ಕೊಟ್ಟ ವರ. ಮಳೆ ಕೊನೆಯ ೪ ತಿಂಗಳು ಸುರಿದು. ಪ್ರತಿಯೊಂದು ಚೂರು ಜಾಗವನ್ನು ಹಸಿರಿನಿಂದ ಮುಚ್ಚಿಬಿಟ್ಟಿತ್ತು. ಎಲ್ಲಿ ನೋಡಿದರಲ್ಲಿ ಹಸಿರು. ಗುಂಪಿನಲ್ಲಿ ಕ್ಯಾಮೆರಾ ತಂದ ಹುಡುಗರಿಂದ ಎಡೆ ಬಿಡದೆ ಕ್ಲಿಕ್ಕುಗಳು. ೯೦ ನಿಮಿಷದ ನಡಿಗೆಯ ನಂತರ ಬುತ್ತಿ ಬಿಚ್ಚಿ ಹೊಟ್ಟೆಯ ಸೇವೆ ಮಾಡಿಕೊಂಡೆವು. ದಾರಿಯಲ್ಲಿ ಕೆಲವೊಂದು ಪಾಳು ಬಿದ್ದ ಮನೆಗಳ ದರ್ಶನವಾಯಿತು. ಈ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವನ್ನು ಮಾಡಲು ಹೋರಾಟ ಸರ್ಕಾರ, ಕೆಲವು ಜನರನ್ನು ಪರಿಹಾರ ಕೊಟ್ಟು ಒಕ್ಕಲೆಬ್ಬಿಸಿದೆ. ಒಂದು ಕಾಲದಲ್ಲಿ ಅಲ್ಲಿ ವಿಶಾಲವಾದ ಗದ್ದೆ ಇತ್ತು ಎಂಬುದು ಗೋಚರವಾಗುತದೆ. ಒಕ್ಕಲೆಬ್ಬಿಸಿದ ನಂತರ ಅಲ್ಲಿ ಗಿಡ ಮರಗಳನ್ನು ನೆಟ್ಟಿದ್ದರೆ ಚೆನ್ನಾಗಿರುತಿತ್ತು .ಈಗ ಅದು ಕಾಟು ಗಿಡಗಳಿಗೆ ತವರು ಮನೆ. ಇರಲಿ, ನಮ್ಮ ಪ್ರಯಾಣ ಅನೇಕ ಗಿರಿ ಶಿಖರಗಳ ನಡುವೆ ಮುಂದುವರೆಯಿತು. 

ವರುಣ ದೇವ ಅಲ್ಲಿ ನಮ್ಮನ್ನು ನೋಡಲಾಗಿ, ಅಲ್ಲಿಂದಲೇ ಆಶೀರ್ವಾದ ಮಾಡಲು, ಮಳೆ ಹನಿಗಳ ನರ್ತನ ಆರಂಭವಾಯಿತು. ನೆನೆದು ತೊಪ್ಪೆಯಾದ ದೇಹದಲ್ಲಿ ಚಾರಣ ಮಾಡುವುದೂ ಒಂದು ಅನುಭವ. ಆದರೆ ಮೇಲೆ ಮೇಲೆ ಹತ್ತಿದಂತೆ ಉಷ್ಣಾಂಶ ಕಡಿಮೆಯಾಯಿತು. ಪರ್ವತಗಳ ಮೇಲ್ಭಾಗದಲ್ಲೂ ಸುರಿಯುತ್ತಿರುವ ಮಳೆಯ ಕಾರಣ, ಎಲ್ಲಾ ಕಡೆ ನೀರಿನ ಝರಿಗಳ ಓಡಾಟ ನಡೆಯುತ್ತಿತ್ತು. ಕೊನೆಗೂ ಸುಮಾರು ೪ ಗಂಟೆಗಳ ಸತತ ಚಾರಣದ ನಡುವೆ ತುತ್ತ ತುದಿಯ ದರ್ಶನ ಲಭ್ಯವಾಯಿತು. ತೀವ್ರವಾಗಿ ಕುಸಿದ ಉಷ್ಣಾಂಶ ಎಲ್ಲರ ಮೈಯನ್ನು ಮರಗಟ್ಟಿಸಿ, ಜಾಸ್ತಿ ಸಮಯ ಅಲ್ಲಿ ಕಳೆಯಲಾಗಲಿಲ್ಲ. ೪ ಚಕ್ಕುಲಿ, ಒಂದು ಫೋಟೋ ನಂತರ ಅಲ್ಲಿಂದ ಕಾಲ್ಕಿತ್ತೆವು. ಎಲ್ಲಿ ನೋಡಿದರಲ್ಲಿ ಶೋಲಾ ಅರಣ್ಯ, ಹುಲ್ಲುಗಾವಲಿನಿಂದ ಆವೃತವಾದ ಕಣಿವೆ, ಇಳಿಜಾರಿನಿಂದ ಕೂಡಿದ ವನರಾಶಿ.











ಕಂಡ ಕಂಡ ಕಡೆ ಬೀಳುವ ಸಣ್ಣ ಸಣ್ಣ ಜಲಪಾತ, ಸಿಹಿಮುತ್ತು ನೀಡಲು ಕಾಯುತಿರುವ ಇಂಬಳ, ಗೋಧೂಳಿಯ ಸಮಯದ ಸುಂದರ ಪರಿಸರ ಇಳಿಯುವ ಆಯಾಸವನ್ನು ಮರೆಸಿ ಹಾಕಿತ್ತು. ಸೂರ್ಯ ಮರೆಯಾಗಿ. ನಾವು ತಂದ ಟಾರ್ಚ್ ಗಳ ಸಹಾಯದೊಂದಿಗೆ ಕತ್ತಲಲ್ಲಿ ದತ್ತ ಕಾನನದ ನಡುವೆ ಸಂತ್ರುಪ್ತಿಯೊಂದಿಗೆ ವಾಪಸ್ ಹೊರೆಟೆವು. ಮನೆ ಸೇರುವ ಹೊತ್ತಿಗೆ ೮.೪೫ ರ ಶುಭ ರಾತ್ರಿ. ರಾತ್ರಿ ಚಾರಣ ಮಾಡಿದ ಈ ದೇಹ ಮತ್ತು ಮನ ಧನ್ಯ. ರಾತ್ರಿ ಬೆಂಕಿ ಹಾಕಿ ಮತ್ತೊಮ್ಮೆ ಮಗದೊಮ್ಮೆ ಪರಿಚಯ ಹೇಳಿಕೊಂಡು ಚಪಾತಿ ಊಟ ಹೊಡ್ಕೊಂಡ್, ಕುಂಭಕರ್ಣನ ಹಾದಿ ಹಿಡಿದೆವು.



ಋತುಚಕ್ರ ತಿರುಗುವುದು ಕಾಲನೆದೆ ಮರುಗುವುದು
ಮೃತನ ಮಣ್ಣಿಂದ ಹೊಸಹುಲ್ಲು ಬೆಳೆಯುವುದು
ಕ್ಷಿತಿ ಗರ್ಭ ಧರಿಸುವಳು ಮತ್ತುದಿಸುವುದು ಜೀವ
ಸತತ ಕೃಷಿಯೋ ಪ್ರಕೃತಿ – ಮಂಕುತಿಮ್ಮ.

ಋತುಗಳ ಚಕ್ರ ತಿರುಗುತ್ತಲೇ ಇರುತ್ತದೆಕಾಲನು ತನ್ನ ಪದಾಘಾತದಲ್ಲಿ ಮೃತರಾಗುವವರ ನೆನೆದು ಮರುಗುತ್ತಾನೆ . ಹಾಗೆ ಮೃತರಾದವರು ಮಣ್ಣಾದ ಮೇಲೆ  ಭೂಮಿಯಮೇಲೆ ಮತ್ತೆ ಹೊಸ ಹುಲ್ಲು ಹುಟ್ಟುತ್ತದೆ.. ಧರೆ ಮತ್ತೆ ಮತ್ತೆ ಗರ್ಭ ಧರಿಸಿ ಹೊಸ ಹೊಸ ಪಲ್ಲವಗಳಿಗೆ ಎಡೆಮಾಡಿ ಕೊಡುತ್ತಾಳೆಮತ್ತೆ ಮತ್ತೆ ಹೊಸ ಜೀವ ಉದಯಿಸುವುದುನಿರಂತರವಾಗಿ ನಡೆಯುವ ಕೃಷಿಯೇ  ಪ್ರಕೃತಿ.
---------------------------------------------------------------------------------------------
೨ನೆ ದಿನ  ಬೆಳಿಗ್ಗೆ ಎದ್ದು ಹತ್ತಿರ ಇರುವ, ಚಿಕ್ಕ ಹಾಗು ಸುಂದರ ಜಲಪಾತವನ್ನು ದರ್ಶಿಸಿದೆವು. ಕೆಲವರು ಇನ್ನು ಗಾಡ ನಿದ್ರೆಯಲ್ಲಿ ಮುಳುಗಿದ್ದರು. ಅದೇನೋ ಗೊತ್ತಿಲ್ಲ, ಆದರೆ ಹಳ್ಳಿಯ ಊಟ ತಿಂಡಿ ಚಂದ. ಆಕ್ಕಿ ಕಡುಬು ರಾಶಿ ರಾಶಿ ನಮ್ಮ ಹೊಟ್ಟೆಗಳಲ್ಲಿ ತೂರಿಕೊಂಡವು. ನಂತರ ಕೆಲವರು ಜೀಪ್ ಪ್ರಯಾಣವನ್ನು ಆರಿಸಿಕೊಂಡರೆ, ನಾವು ೩ ಜನ ಸಾಹಸಿಗಳು :) ನಡೆದು ಹೋಗುವ ಆಯ್ಕೆಗೆ ಶರಣಾದೆವು.


ಕೆಳಗೆ ಬಿರ ಬಿರನೆ ನಡೆದು ಎಲ್ಲರನ್ನು ಕೊಡಿಕೊಂಡ ನಂತರ , ಹನುಮನ ಗುಂಡಿಯ ಕಡೆಗೆ ವಾಹನದಲ್ಲಿ ಪಯಣ. ದಾರಿಯಲ್ಲಿ ಕಡಂಬಿ ಜಲಪಾತದ ಶೀಘ್ರ ದರ್ಶನ. ಹನುಮಾನ್ ಗುಂಡಿಯಲ್ಲಿ ಹೇರಳವಾಗಿ ಪ್ರವಾಸಿಗರು ತುಂಬಿಕೊಂಡಿದ್ದರು. ಅಲ್ಲಿ ನೀರು ಬೀಳುವ ಸ್ಥಳದಲ್ಲಿ ಕೂರುವುದೇ ಮಜಾ. ಯಾವ ಮಸಾಜ್ ಕೇಂದ್ರಗಳಿಗೂ ಕಡಿಮೆಯಿಲ್ಲ. ಬೆನ್ನಿನ ಮೇಲೆ ಬರೆ ಹಾಕುವಂತೆ  ನೀರು ಮೇಲಿಂದ ದುಮುಕುತ್ತದೆ. ಸುಮಾರು ಅರ್ಧ ಗಂಟೆ ಕೊರೆಯುವ ನೀರಿನಲ್ಲಿ ಶುಭ್ರ ಸ್ನಾನ ಮಾಡಿ ಗಾಡಿ ಬಿಟ್ಟೆವು. ಅಲ್ಲಿಂದ ಲಕ್ಯ ಡ್ಯಾಮ್ ಕಡೆಗೆ ದಾವಿಸಿ, ಹೂಳು ತುಂಬಿದ ಮತ್ತು ನಿಸರ್ಗದ ಮೇಲೆ ಮನುಜ ಮಾಡಿದ ಅತ್ಯಾಚಾರಗಳಿಗೆ ಕನ್ನಡಿಯೋ ಎಂಬಂತೆ ಭಾಸವಾಗುವ ಲಕ್ಯ ವನ್ನು ನೋಡಿ ಅಂಬು ತೀರ್ಥದ ಕಡೆಗೆ ಪಯಣ ಬೆಳೆಸಿದೆವು. ಅಂಬು ತೀರ್ಥದಲ್ಲಿ "೯೦ ಅಡಿ ಆಳವಿದೆ" ಎಂಬ ಪಲಕವನ್ನು ನೋಡಿ, ಸುಮ್ಮನೆ ದಂಡೆಯಲ್ಲಿ ಕೂತು, ಹೊರನಾಡಿನ ಸನ್ನಿದಿಯತ್ತ ಹೊರಟೆವು. ತಾಯಿ ದರ್ಶನದ ನಂತರ ರಾತ್ರಿ ಪ್ರಸಾದ ವನ್ನು ಸೇವಿಸಿಕೊಂಡು ೯ ಗಂಟೆಯ ಸುಮಾರಿಗೆ ಮತ್ತೆ ಪಯಣ ಬೆಳೆಸಿದೆವು. ನಾನು ಸ್ವಲ್ಪ ನಿದ್ದೆಗೆ ಕಡಿವಾಣ ಹಾಕಿ, ಕೊಟ್ಟಿಗೆ ಹಾರ ಬರುವವರೆಗೂ ಕಾದು, ನೀರು ದೋಸೆ, ಕಡುಬು ಹೊಟ್ತೆಗೇರಿಸಿಕೊಂಡು ಇನ್ನೊಂದು ಶುಭ ಚಾರಣದ ನೆನಪಿನೊಂದಿಗೆ ನಿದ್ದೆ ಹೋದೆ. 

------------------------------------------------------------------------------------------------------
Kudremukha Trek -  The last one for this Monsoon

Kudremukha is the largest tropical evergreen moutain range in karnataka. This place is known for beautiful hills, lush green grass lands, thick rain forests and numerous streams. in fact, a wonderful place to trek for everyone who love mother nature.  

I always wanted to be there, but could never make it. Last Monsoon, we made a gentle effort to trek, but pouring rain made us impossible to cross river Bhadra. A invitation from Bangalore Ascenders revived our intentions again. October is the best time to visit Kudremukha, as you won't have to face too much of rain and don't have to miss lush green hills. 

We were a group of 11 and gathered near Shantala silk in Bangalore. The FT arrived on time and group was full of experienced trekkers. I badly wanted to be awake till we reach Kottigehaara to taste "Neer Dose". I guess I slept minute before reaching Kottigehaara. Sometimes things doesn't go as planned. ....


We reached Kalasa town around 6.30 in the morning and finished our breakfast. Not sure why, but food in small towns always tastes better. After breakfast we started towards nearby village. We reached the place near Samse and took a jeep to reach Sathish's house. Seven kilometer jeep journey was kind of an adventure for most of us :). I always wonder how this " Mahindra jeep" was made few decades back. This Indian product is uncomparable and fares better in hilly regions than any other vehicle.


Nimbu juice in Sathish's place energised all of us and we had to pack our lunch to have it in midway. We dumped our luggage and started towards the final destination.  From beginning itself, it was a scenic heaven and photographers from the group were busy installing tripad almost all the places. Leeches were all over and they were happy sucking unclean blood of Bangaloreans. We crossed number of streams to settle in one place for lunch. We took close to 4 hours to finish 10 kilometre stretch but it was less tiresome due to lovely weather. Halfway our mark, sky opened up to create temporary streams all over.  The view was spectacular and weather was chilling. At the top we couldn't spend much time due to heavy winds and rain. We started our journey back around 4.15. 4PM to 6PM is the best time to enjoy nature. especially if you are in a heaven like this. I wondered how can any government allow mining in a place like this.










                                                                                                                                  It was getting dark, and torch we have got was of great help. Way back was very slippery and there were more streams to cross. trekking at night in rain forest is an amazing experience and scary one for starters. We took around 4.5 hours to reach Sathish's place and it was time for us clear leeches which were all over.

after a campfire and super dinner, it was time to go asleep. Few of got up early next day to visit nearby falls and others were enjoying rainforest sleep....


2nd day plan was to visit nearby known places. few took a jeep to go down and others opted to walk 7 KM. We started towards Hanumangundi falls and visited "Kadambi falls" on our way. Hanuman Gundi falls was crowded and we could still get our place under the falls. Bathing under a waterfall is the best way to get your body massaged. This falls is a not so slippery and gives the best experience if you want to be in water for some time.


After enjoying spending time in waterfalls we started towards Lakya dam. Lakya is a check dam built by Kudremukh Iron Ore Company having a height of 100 meter. The main utility of this dam is to collect the waste materials from the mining operations and it is a dam of silt not water. 



The dam is at the backdrop of picturesque hilly terrains, shoal forests and calmly flowing rivers. It is argued that the Lakya dam has already made the submergence of 572 hectres of shola forests. After a quick photo session in Lakya, we moved towards Kalasa town for Lunch.


Post lunch, it was time to visit Ambuteertha. Ambuteertha is a place where river Bhadra narrows down to few meters. The continuous rush of waters has left interesting carvings on the rocks. There was a signboard "90 feet deep", which was enough warning for all of us not to venture into the water. We spent good one hour on the spot enjoying the rock formation created by the river and moved towards Horanadu Annaporneshwari temple.

After a quick darshan and a wonderful Dinner at the temple we started towards Bangalore. On our way we stopped in Kottigehaara for Neer Dosa plus Kadubu. Neer Dosa is a special kind of dosa from Karnataka (Dakshina Kannada) prepared from rice. Neer in Kannada means ‘Water’. Neer dosa is prepared by grinding soaked rice into a thin watery batter and then made into pancakes (thin) on hot griddle. Had enough Dosas plus Kadubu to make up for the lost opportunity.

Thank you Bangalore Ascenders for organizing this trek. It's difficult to get like minded people for treks and BASC provides a platform for all those who love mother nature.


Pics from Vishwas HK

Pics from Gururaj BS

Sunday 22 July 2012

ಅಂಬರ ಚುಂಬಿತ ಪರ್ವತ ಚಾರಣ

ಕರುನಾಡ ದಟ್ಟಡವಿಯಲ್ಲಿ ಅನೇಕ ಚಾರಣ ಸೂಕ್ತ ಸ್ಥಳಗಳಿವೆ, ಅದರಲ್ಲಿ ಮನುಜ ಕಲ್ಮಶವಿಲ್ಲದ ಸ್ಥಳ "ಕುಮಾರ ಪರ್ವತ". ಅನೇಕ ವಿಫಲ ಪ್ರಯತ್ನಗಳ ನಂತರ ಇಲ್ಲಿಗೆ ಕಾಲಿಡುವ ಅವಕಾಶ ನನ್ನದಾಯಿತು. ಬೆಂಗಳೂರು ಚಾರಣಿಗರ ಗುಂಪಿನಿಂದ ಬಂದ ಆಹ್ವಾನವನ್ನು ಉಪಯೋಗಿಸಿಕೊಂಡು ಅಲ್ಲಿಗೆ ಹೊರಟೆ. ಹೈದರಾಬಾದ್ ಬಿಸಿಲಿನಿಂದ ಮುಕ್ತಿಯೂ ಬೇಕಾಗಿತ್ತು. ಬೆಂಗಳೂರಿನಿಂದ ರಾತ್ರಿ ಹೊರತು ಬೆಳಿಗ್ಗೆ ಸೋಮವಾರಪೇಟೆ ತಲುಪಿದಿವು. ಹೊಟ್ಟೆಯಲ್ಲಿ ಅನೇಕಾನೇಕ ಇಡ್ಲಿಗಳನ್ನು ಇಳಿಸಿಕೊಂಡು, ಕಾಡು ದಾರಿಯ ವೋಲ್ವೋ (ಜೀಪ್) ನಲ್ಲಿ, ಚಾರಣ ಶುರುವಾಗುವ ಸ್ತಳಕ್ಕೆ ದಾವಿಸಿದೆವು. ಒಟ್ಟು ಒಂಬತ್ತು ಮಂಡೆಗಳು (ಜನ), ಪರಿಚಯದಲ್ಲಿ ಅಪರಿಚಿತರು, ಹವ್ಯಾಸದಲ್ಲಿ ಬಂಧುಗಳು...

ಪುಷ್ಪಗಿರಿ ಧಾಮವು ಪೂರ್ತಿ ಮೋಡದ ಮುಸುಕಿ ಹಾಕಿಕೊಂಡು   ಮಲಗಿದಂತಿತ್ತು, ಎಲ್ಲಿ ನೋಡಿದರಲ್ಲಿ ಮೋಡದ ಛಾಯೆ, ನಮ್ಮ ಮೊಗದಲ್ಲಿ ಉತ್ಸಾಹದ ಛಾಯೆ. ಇಂಬಳಗಳ ಚುಂಬನಗಳು, ಆಂಗ್ಲ ಭಾಷೆಯ ಚಲನ ಚಿತ್ರಗಳಲ್ಲಿ ನಾಯಕ  ನಟನಿಗೆ ಕಾಟ ಕೊಡುವಂಥ ವಿಚಿತ್ರ ಜೀವಿಗಳ ನೆನಪು ತರುವಂತಹ ಸನ್ನಿವೇಶ. ನಿತ್ಯ ಹರಿದ್ವರ್ಣ, ನಿತ್ಯ ಸುಂದರ ಕಾಡುಗಳ ನಡುವೆ  ಹರಿಯುವ ಜಲಧಾರೆಗಳು ಸೌಂದರ್ಯವನ್ನು  ಇಮ್ಮಡಿಗೊಳಿಸಿದ್ದವು . ೪ ಗಂಟೆಗಳಲ್ಲಿ  ಪರ್ವತದ ತುತ್ತ ತುದಿಯನ್ನು ತಲುಪಿದೆವು. ಜಾರುವ ಬಂಡೆಗಳ ದಾರಿ, ಪರಿಸರ ನಿರ್ಮಿಸಿದ  ದೈಹಿಕ ವ್ಯಾಯಾಮ ಶಾಲೆಯಂತಿತ್ತು. ಪರ್ವತದ ತುದಿಯಲ್ಲಿ ನೀರವ ಮೌನ, ನಾವು ಕಾಲಿಡುವ ತನಕ ಮಾತ್ರ :) . ಹೊಟ್ಟೆಗೆ  ಇಂಧನವನ್ನು ತುಂಬಿಸಿಕೊಂಡು ಧೋ ಎಂದು ಸುರಿಯುವ ವರ್ಷಧಾರೆಯ ನಡುವೆ ಕಳೆದು ಹೋದ ದಾರಿಯನ್ನು ಹುಡುಕಿ,  ನಿಧಾನವಾಗಿ ಕುಕ್ಕೆಯ ಕಡೆಗೆ ಪ್ರಯಾಣ ಆರಂಭಿಸಿದೆವು. ಸುರಿಯುವ ಮಳೆ, ಸಮಾನ ಮನಸ್ಕ ಚಾರಣಗಿರು, ಸೌಂದರ್ಯ ಭರಿತ ಪ್ರಕ್ರತಿ, ಇದು ಪ್ರತಿಯೊಬ್ಬ ಚಾರಣಿಗನ ಹಂಬಲ. ಇದನ್ನು ಒಂದು ದಿನದ ಮಟ್ಟಿಗೆ ಪಡೆದ ನಾನೇ ಧನ್ಯ. 

In search of Monsoon………… Kumara Parvata

Being a member of BASC for close to 3 years, I was never able to make it to their trekking programs. Always wanted to be there and timing never worked in my favor. Finally decided to be there for a wonderful adventure.  Was happy to be shortlisted for the Kumaara Parvata trek.

Landed in Bangalore a day before, was really excited about this trek. Trekked a lot in last four years, but KP remained a distant dream. There are numerous trekking places in namma Karnataka, but corrupt human made his way all over. Kumaara Parvata gives you opportunity to see a different world where you can get glimpse of the real heaven.   

Reached Kempegauda Bus stand at 10.  Didn’t know anyone from the group, Karthik identified us in the bus stand, The code word was  “Kuamara Parvata”… J

Got introduced to the few members, shared few Trekking experiences, and It was time to snore off. Reached Somavara Pete at 6. I was expecting it to pour over there. Surprisingly, the sky was silent, heard from few localities that it’s raining drought everywhere.

Refreshed at a lodge nearby and had huge number Idlies to refill our energy. Jeep was ready to take us to the starting point and we fitted our self comfortably in it. The trek starting point was a wonderful scenic place and a temple nearby added to its glory.

A quick introductory session helped us know the other members and it was the Beginning of a wonderful journey at 8.45 in the morning. Everybody we met advised us not to venture out alone, as the mist makes the search impossible. After taking the permission from the forest department, we started towards the destination.

We could see absolutely nothing of the mountains due to the arrogant clouds. Leeches were happy to see their food coming their way. They chose their favorite blood group and every person in the team had their own medicine to avoid them. I stay in Hyderabad, and a leech costs here anywhere between 100 to 500 Rs. It costs thousands to get the leech therapy. Hence, I was happy to get it free of cost.

We found a snake.  Few from the group called it as Malabar Pit Viper! As per Ajay it was “Trimeresurus malabaricus” (oof Science). I defined it as just a “Haavu”. 

There were plenty of streams on our way, the forest was at its best. Mr. Dalvir and Sarvanan was in the great form and was always ahead in the trekking race. Though it was a complete climbing exercise, the pleasant weather didn’t let us get tired.  The rocks were damn slippery and the way guys made it looked like a heavy adventureJ. Me and Amruth took the safest way and enjoyed seeing others adventure in some places. We were pretty quick and made it to the top by 12.30 in the afternoon. For few of us it was first time KP experience and needless to say the effort is worth it. 

We had a quick buffet at the top and the variety of food was great. We met a small group over there who were looking for the way to go back. One of our team enthusiastic team member guided them, and slipped on the way out of excitement. Heard he got a nice “First Aid”J.

It was time to head back after a noisy photographic session. The Rain god sighted us there and thought of giving us a bath. There it started raining. The view from the top was completely missing as expected.

The entire trekking Group
We were heading back, and the other group was returning as they didn’t get the way right. Few of us took a left and right turns to find the right way. It took like close to an hour and the rain created lot of temporary water falls by then. It was a completely new experience finding way into the deep ascends, and Karthik’s experience was of great help.  There was a way out but terribly slippery. We spent close to an hour and half to move out of the place, as the team was busy helping the unknown group.

Post that it was a smooth way down and beginning of a long walk in the Monsoon. Intermittent but heavy rain made us feel the real monsoon. The ascend down gave us some good moments for photography. We had to move fast to reach Kukke before its gets dark. We were however prepared for the worst with all of us having a torch.  We didn’t take rest in “Bhattra Mane” in the interest of time………

We got few very good glimpse of nature for few minutes on our way. We reached the trek ending point at around 7PM. We were happy to finish the trek in one day which not many suggests. Kumara Parvata is definitely a two day trek, but if you have the fitness and the Will, then you can definitely make it in one day.    

The trek was the most challenging trek I have ever done and a memorable one which got me quite a lot of nature enthusiastic friends. Hopefully I will get a chance to go for many more treks with BASC and newly acquired friends….  What’s say? Amruth, Sayeesha, Vishwas, Sumanth, Ajay, Karthik, Dalvir, Saravanan……………………..


Special Thanks to Karthik for leading the team and It is just the beginning…………












Link to the photos - http://www.facebook.com/media/set/?set=a.10150884883031734.384038.694181733&type=3

Sunday 30 January 2011

ಶಿವಗಂಗಾ

ಶಾಲ್ಮಲೆಯ ಸೊಬಗು ಜಲಧಾರೆಯಲ್ಲಿ ಅದ್ಭುತವಾಗಿ ಗೋಚರಿಸುತ್ತದೆ. ತನ್ನೊಡಲ ಭಯಾನಕತೆಯ ಮುಚ್ಚಿಟ್ಟು, ಜುಳು ಜುಳು ಹರಿವ ಸ್ವಚ್ಛ ನೀರು ಸಾಹಸಕ್ಕೆ ಕೈಬೀಸುತ್ತದೆ. ಶಿವಗಂಗಾ ಜಲಪಾತ ನೋಡಲು ಬನ್ನಿ.. ಬಂದವರು ಹುಡುಗಾಟ ಆಡಬೇಡಿ..



ಶಿವಗಂಗಾ ಜಲಪಾತದಲ್ಲಿ ಶಾಲ್ಮಲೆ ಸುಮಾರು 359 ಅಡಿ ಎತ್ತರದಿಂದ ಬಾಗುತ್ತ, ಬಳುಕುತ್ತಾ 3ಹಂತದ ಜಲಧಾರೆಯಾಗಿ ಧುಮುಕಿ ಕಣಿವೆಗೆ ಇಳಿಯುತ್ತಾಳೆ. ಸುಂದರ ಹಾಲ್ನೊರೆಯ ದೃಶ್ಯ ಬೇಸಿಗೆಯಲ್ಲಿ ಗೋಚರಿಸಿದರೆ, ಮಳೆಯ ಕೆನ್ನೀರು ಧುಮ್ಮಿಕ್ಕುವ ನೋಟ ಕಣ್ಣು ತುಂಬುತ್ತದೆ.



ಎರಡು ಶಿಲಾ ರಚನೆಯ ಅದ್ಭುತ ಪದರಗಳ ಮಧ್ಯೆ ಸಾಗುವ ಈ ಜಲಪಾತ ತನ್ನ ಪ್ರತಿ ಹಂತದ ತಳಭಾಗ ತಲುಪುವ ಚಪಲವನ್ನು ಪ್ರವಾಸಿಗನ ಮನದಲ್ಲಿ ಮೂಡಿಸುತ್ತದೆ. ನದಿ ತಟದ ಮುಖಾಂತರ ಕಡಿದಾದ ಶಿಲಾ ಭಾಗವನ್ನು ಏರುತ್ತಾ ಜಲಪಾತದ ನೀರ ಹನಿಗಳ ಆನಂದ ಪಡೆಯುವಾಸೆ ಮೂಡುವುದು ಸಹಜ. ಆದರೆ ಇದು ಅಪಾಯಕಾರಿ. ಎಂಥ ತಜ್ಞ ಸಾಹಸಿಯನ್ನು ಕಂಗೆಡಿಸ ಬಲ್ಲ ಪೃಕೃತಿ ಸೋಜಿಗ ಶಿವಗಂಗಾ ಜಲಪಾತ.



ಶಾಂತವಾಗಿ ಹುಡುಗಾಟಕ್ಕೆ ತೊಡಗದೆ, ದೈಹಿಕ ಸಮತೋಲನ ಮತ್ತು ಸಹಜವಾದ ರೀತಿಯಿಂದ ದಡದಲ್ಲಿನ ಸುರಕ್ಷಿತ ಶಿಲೆಗಳ ಮೇಲೆ ಕುಳಿತು ಹವ್ಯಾಸಿ ಮೀನುಗಾರಿಕೆ ನಡೆಸುತ್ತ ಆನಂದಿಸಬಹುದು. ಹೊತ್ತು ತಂದ ಬುತ್ತಿ ತಿನ್ನಬಹುದು.



ಜಲಪಾತದ ಪ್ರತಿ ಹಂತದ ಮುಂದಿನ ಶಾಂತ ಶಾಲ್ಮಲೆಯ ಒಡಲಲ್ಲಿ ಅಡಗಿದೆ ರುದ್ರತೆಯ ರಹಸ್ಯ. ಅದೇ ಆಳದ ನೀರ ಸುಳಿವಿನಿಂದ ಕೂಡಿದ ಶಿಲಾ ಪದರದ ಮಧ್ಯೆ ಅವಿತಿರುವ ಮೂರು ಗುಂಡಿಗಳೆನ್ನಿ ಅಥವಾ ಮಡುವು ಎನ್ನಬಹುದಾದ ಸ್ಥಾನಗಳು. ಶಾಲ್ಮಲೆಯ ಸೊಬಗು ಜಲಧಾರೆಯಲ್ಲಿ ಅದ್ಭುತವಾಗಿ ಗೋಚರಿಸಿದರೆ, ನದಿಯ ಪಾತ್ರ ತಲುಪಿದವರಿಗೆ ಬೇಸಿಗೆಯ ದಿನದಲ್ಲಿ ಜುಳು ಜುಳು ಹರಿವ ಸ್ವಚ್ಛ ನೀರು ಸಾಹಸಕ್ಕೆ ಕೈಬೀಸುತ್ತದೆ, ತನ್ನೊಡಲ ಭಯಾನಕತೆಯ ಮುಚ್ಚಿಟ್ಟು. ನೀರ ಮೋಹಕತೆಗೆ ಮರುಳಾಗಿ ಈಸಲೆಂದೋ, ಪಕ್ಕದ ಶಿಲಾ ಪದರದಿಂದ ಡೈವ ಹೊಡೆಯುವ ಅಥವಾ ನೀರಾಟಕ್ಕೆಂದು ಇಳಿದರೆ, ಹಿಂದೆ ಇತಿಹಾಸದ ಪುಟ ಸೇರಿದ ಘಟನೆಗಳ ಪುನರಾವರ್ತನೆ ಸಂಭವವೇ ಹೆಚ್ಚು.



ಪೋಲಿಸ ಇಲಾಖೆಯ ವರದಿಯಂತೆ 1984ರ ನಂತರ ಸುಂದರತೆಯ ಒಡಲಿನಲ್ಲಿ ಸಾಹಸಕ್ಕಿಳಿದ 10 ಮಂದಿ ನೀರು ಪಾಲಾಗಿ ಮಡುವಿನಲ್ಲಿ ಸೇರಿ ಹೋಗಿದ್ದಾರೆ. ಇವರಲ್ಲಿ ಪ್ರವಾಸಿಗರೇ ಹೆಚ್ಚು. ಅದರಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದ್ದು, ಓರ್ವ ವೈದ್ಯರೂ ಸೇರಿದ್ದಾರೆ. ಅನಧಿಕೃತ ಮಾಹಿತಿ ಪ್ರಕಾರ, ಈ ಸಂಖ್ಯೆ 20ಕ್ಕೇರಿದೆ ಎನ್ನಲಾಗಿದೆ. 2004ರ ಮೇ ತಿಂಗಳಿನ ಒಂದು ವಾರದ ಅವಧಿಯಲ್ಲಿ ಮೂವರು ವಿಧ್ಯಾರ್ಥಿಗಳು ನೀರ ಮಡುವಿಗೆ ಸೇರಿದ್ದಾರೆ. ಕೇವಲ ನೀರಾಟ ಮಾಡಲೆಂದು ಇಳಿದವರಲ್ಲ, ಬುತ್ತಿಯ ನಂತರ ಕೈತೊಳೆಯುವ ಆಸೆ ತೋರಿದವರೂ ಇಲ್ಲಿ ನೀರ ಮಡಿಲೊಳಗೆ ಸೇರಿದ್ದಾರೆ.



ಈ ಜಲಪಾತದ ಕಣಿವೆಯ ನದಿಯ ಹರಿವ ಪಾತ್ರದ ತನಕ ತಲುಪುವ ಮಾರ್ಗ ಕಡಿದಾದ ಮಲೆನಾಡ ಅರಣ್ಯ ಹಾದಿಯಲ್ಲಿ ಇಳಿಯುತ್ತ ಸಾಗಬೇಕು. ಇದು ಪ್ರಯಾಸದ ದಾರಿಯಾದ್ದರಿಂದ ಎಚ್ಚರಿಕೆ ಅಗತ್ಯ. ಎಚ್ಚರಿಕೆ ಫಲಕಗಳು ಜಲಪಾತದಲ್ಲಿನ 3 ಭಯಾನಕ ಗುಂಡಿಗಳ ಮಾಹಿತಿ ನೀಡುತ್ತವೆ. ದೊರೆತ ಮಾಹಿತಿಯಂತೆ ಜಲಪಾತದ 3 ಹಂತದಲ್ಲಿ ತಲಾ ಒಂದರಂತೆ ಇರುವ ಈ ಗುಂಡಿಗಳು ಒಂದಕ್ಕಿಂತ ಒಂದು ಆಳವಾಗಿದ್ದು ಇದರ ಒಳಭಾಗದಲ್ಲಿ ನೀರ ರಭಸಕ್ಕೆ ಕಲ್ಲಿನ ಪದರ ಕೊರೆದು ಪೊಟರೆಗಳು ಉಂಟಾಗಿವೆ.



ಮೇಲೆ ಹೇಳಿದ 3 ಗುಂಡಿಗಳ ಆಳ 12ರಿಂದ 18 ಅಡಿ, 18ರಿಂದ 22 ಅಡಿ, 20ರಿಂದ 25 ಅಡಿ ಇದೆ ಎನ್ನಲಾಗುತ್ತದೆ. ಇಲ್ಲಿನ ದುರ್ಮರಣದಲ್ಲಿ ಶವ ಸಿಗುವುದು ಅತಿ ಪ್ರಯಾಸವೇ. ಶವಕ್ಕಾಗಿಯೇ ನಾಲ್ಕೈದು ದಿನ ಕಾಯಬೇಕಾದ ಅನಿವಾರ್ಯ ಸನ್ನಿವೇಶಗಳು ಎದುರಾಗಿವೆ. ನದಿ ತಾನಾಗಿಯೇ ಮೂರು ದಿನದ ನಂತರ ಶವವನ್ನು ಮೇಲೆ ತಳ್ಳುವುದು ಇಲ್ಲಿ ಅಸಾಧ್ಯ, ಎಂದರೆ ಅಪನಂಬಿಕೆ ಬೇಡ. ಇದಕ್ಕೆ ಗುಂಡಿಗಳಲ್ಲಿನ ಪೊಟರೆಯ ಶಿಲಾರಚನೆಯೇ ಕಾರಣ. ಮುಳುಗು ತಜ್ಞರನ್ನೇ ಕಂಗಾಲು ಮಾಡುವ ಈ ಜಲಪಾತದ ತಾಣ ನಿಗೂಢತೆಯ ಒಡಲು.



Saturday 11 September 2010

ಮಳೆಗಾಲದ ಆಕರ್ಷಣೆ

ಅಬ್ಬಿ ಜಲಪಾತವು ಕೊಡಗು ಜಿಲ್ಲೆಯ ಮುಖ್ಯ ಪಟ್ಟಣವಾದ ಮಡಿಕೇರಿಯಿಂದ ಕೇವಲ ೫ ಕಿ.ಮೀ. ದೂರದಲ್ಲಿದೆ. ಮಡಿಕೇರಿಯವರೆಗೆ ಬಸ್ ಸೌಕರ್ಯವಿದ್ದು ಅಲ್ಲಿಂದ ೫ ಕಿ.ಮೀ. ಯಾವುದೇ ಸ್ಥಳೀಯ ಖಾಸಗಿ ವಾಹನವನ್ನು ಹಿಡಿದು ಹೋಗಬಹುದು.ನಂತರ ಸುಮಾರು ೫೦೦ ಮೀ ನಷ್ಟು ಕಾಫಿ ತೋಟದ ಮಧ್ಯೆ ನಡೆದುಕೊಂಡು ಹೋದರೆ ಈ ಸುಂದರವಾದ ಜಲಪಾತ ಕಾಣಸಿಗುತ್ತದೆ. ಮಳೆಗಾಲದ ನಂತರದ ಅವಧಿಯಲ್ಲಿ ಹೋದರೆ ೧೦೭ ಅಡಿ ಎತ್ತರದಿಂದ ಮೈದುಂಬಿಕೊಂಡು ಧುಮುಕುವ ಜಲಪಾತದ ವೈಭವವನ್ನು ಸವಿಯಬಹುದು.



:ಕಾವೇರಿ ಜಲಾನಯನ ಪ್ರದೇಶಗಳಲ್ಲಿ, ಭಾಗಮಂಡಲದ ಸುತ್ತ ಮುತ್ತ ಮಳೆ ಸುರಿಯುತ್ತಿದ್ದಾಗ ಕನ್ನಡ ನಾಡಿನ ಜೀವನದಿ ಕಾವೇರಿ ಉಕ್ಕಿ ಹರಿಯುತ್ತದೆ. ಕೊಡಗಿನ ರಮಣೀಯ ಹಸಿರು ರಾಶಿಯ ಮೇಲೆ ಮಳೆಯ ಹನಿಗಳು ಬೀಳುತ್ತಿದ್ದಂತೆಯೇ ಇಲ್ಲಿನ ವಿಖ್ಯಾತ ಜಲಪಾತ ‘ಅಬ್ಬೆ’ ಮೈದುಂಬಿ ಧುಮ್ಮುಕ್ಕುತ್ತದೆ. ಹಾಲು ನೊರೆಯಂತೆ ಆಕರ್ಷಕವಾಗಿ ಧುಮ್ಮಿಕ್ಕುವ ಅಬ್ಬಿ, ತನ್ನ ಪೂರ್ಣ ಸೊಬಗನ್ನು ಪಡೆವುದೇ ಮಳೆಗಾಲದಲ್ಲಿ. ಹೀಗಾಗೆ ಅಬ್ಬಿಗೆ ಮಳೆಗಾಲದ ಮದುಮಗಳು ಎಂಬ ಹೆಸರೂ ಇದೆ.



ರಭಸದಿಂದ ಭೋರ್ಗರೆವ ಅಬ್ಬಿಯ ಆರ್ಭಟ ಮಳೆಗಾಲದಲ್ಲಿ ಅರ್ಧ ಕಿಲೋ ಮೀಟರ್ ದೂರ ಕೇಳುತ್ತದೆ. ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಅಬ್ಬಿಯ ಜಲಪಾತ ಹಾಲು ನೊರೆಯಂತಹ ರಮಣೀಯ ದೃಶ್ಯದೊಂದಿಗೆ ಮತ್ತಷ್ಟು ಕಳೆಗಟ್ಟುತ್ತದೆ. ನೋಡುಗರಿಗೆ ಅಮಿತಾನಂದವನ್ನು ನೀಡುತ್ತದೆ.



ಇಲ್ಲಿರುವ ತೂಗುಯ್ಯಾಲೆಯ ಮೇಲೆ ಮಳೆಯಲ್ಲಿ ತೋಯುತ್ತಾ, ಅತ್ತಿಂದಿತ್ತ, ಇತ್ತಿಂದತ್ತ ಓಲಾಡುತ್ತಾ ಸಾಗಿದರೆ, ಧುಮ್ಮಿಕ್ಕುವ ಭೋರ್ಗರೆಯುತ್ತಾ ಧುಮ್ಮಿಕ್ಕುವ ಅಬ್ಬಿಯ ಜಲಹನಿಗಳೂ ನಿಮಗೆ ಪನ್ನೀರ ಎರಚುತ್ತಾ ಸ್ವಾಗತ ಕೋರುತ್ತವೆ. ಬೇಸಿಗೆಯಲ್ಲಿ ಒಣಗಿ ತನ್ನ ಸೊಬಗನ್ನು ಕಳೆದುಕೊಳ್ಳುವ ಮನೋಹರವಾದ ಅಬ್ಬಿ ಜಲಪಾತದ ಸೊಬಗನ್ನು ಸವಿಯಲು ಮಳೆಗಾಲವೇ ಸೂಕ್ತ.

Friday 26 March 2010

ಪಲ್ಲವಿ ಎಂ ಡಿ, ಸಿ ಅಶ್ವಥ್ in ಕನ್ನಡವೇ ಸತ್ಯ



ಮುಕ್ತ mukta



ತಪ್ಪು ಮಾಡದೋರ್ ಯಾರವ್ರೆ

Saturday 13 March 2010

ಸ್ವರ ಸ್ಮರಣೆ - ಒಂದು ಸ್ಮರಣೆ


ಸ್ವರ ಸ್ಮರಣೆ - ಒಂದು ಸ್ಮರಣೆ
ನಾನು ದಿನಾ ತಪ್ಪದೆ ಮಾಡುವಂಥ ಒಂದು ಕೆಲಸ ಅಂದ್ರೆ thatskannada.ವೆಬ್ ಸೈಟ್ ಚೆಕ್ ಮಾಡೋದು... ಒಂದು ದಿನಾ ನಾನು ತುಂಬಾ ವರ್ಷದಿಂದ ಜಾತಕ ಪಕ್ಷಿ ತರ ಕಾಯ್ತಾ ಇದ್ದ ಒಂದು ಕಾರ್ಯಕ್ರಮದ ಬಗ್ಗೆ ಒಂದು ಲೇಖನ ಕಾಣ್ತು.. ಸಿಕ್ಕಾಪಟ್ಟೆ ಸಂತೋಷ ಆಗಿ ಬಿಡ್ತು ಅದನ್ನ ನೋಡಿ...ಯಾಕೆ ಅಂದ್ರೆ ಅದು ನಮ್ಮ ಎಂ ಡಿ ಪಲ್ಲವಿ ಅವರ ಲೈವ್ ಕಾರ್ಯಕ್ರಮದ ಜಾಹಿರಾತು. ಅದೇ "ಸ್ವರ ಸ್ಮರಣೆ" (Swara Smarane ). ಆದ್ರೆ ದಿನಾ ಮಾತ್ರ ಗುರುವಾರ, ಯೋಚನೆ ಮಾಡ್ದೆ..."Is it worth taking a day off for the program " ಅಂತ.. ಇದೇ ರೀತಿ ಸಿ. ಅಶ್ವತ್ಥ ಬಗ್ಗೆ ಯೋಚನೆ ಮಾಡಿ,, ಕೊನೆಗೂ ಅವರ ದರ್ಶನ ಆಗಲಿಲ್ಲ,,,so ನಾನು ಹೋಗೋ ಮುಂಚೆ ಪಲ್ಲವಿ ಅವರನ್ನು ನೋಡಬೇಕು ಅಂತ decide ಮಾಡಿ ಬಿಟ್ಟೆ..ರಜ ಅಂತೂ sanction ಆಯ್ತು.. tx to my TL ...
ಅಂತು ಇಂತೂ ಟಿಕೆಟ್ ಬುಕ್ ಆಯ್ತು.,.ಆ ದಿನಾನು ಬಂತು,,, ಬೆಂಗಳೂರು ಚೌಡಯ್ಯ ಸ್ಮಾರಕ ಭವನದಲ್ಲಿ ಅರ್ಧ ಗಂಟೆ ಮುಂಚೆನೇ ಹೋಗಿ ಬರೋ ಮಹಾ ಜನತೆಯನ್ನು ನೋಡ್ತಾ ನಿಂತಿದ್ದೆ,,,ಒಂದೇ ಒಂದೇ ಆಸೆಯೊಂದಿಗೆ,...ಪಲ್ಲವಿ ಅಲ್ಲೇ ಎಲ್ಲಾರು ಬರಬಹುದು ಅಂತ...(ಕಾಣದ ಕಡಲಿಗೆ ಹಂಬಲಿಸಿದೆ ಮನ,, ಅಂತ ನನ್ನ ತಲೆಯಲ್ಲಿ ಹಾಡು play ಆಗ್ತಾ ಇತ್ತು.,).. ಕಾಣದ ಕಡಲು ಸಿಗದೇ ಇದ್ರೂ,, ಕಾಣದ ಬೆಟ್ಟ ಕಂಡು ಬಿಡ್ತು...Thats MR ಅರುಣ್ ಕುಮಾರ್ .("ಇವರು ಯಾರು ಬಲ್ಲಿರೇನು? ಪಲ್ಲವಿಯವರ ಯಜಮಾನರು ಗೊತ್ತಿಲ್ಲವೇನು?).. ಅವರು ಒಂದು ಕಾರಿಂದ ಇಳಿತ ಇದ್ರು.. ಅಂಥಹ ದೊಡ್ಡ ಬಾಡಿ ಅಂಥ ಚಿಕ್ಕ ಗಾಡಿಯಲ್ಲಿ ಹೇಗೆ ಫಿಟ್ ಆಯ್ತೋ ಗೊತ್ತಿಲ್ಲ. ಅಂತು  ಅದೇ ಕಾರು ಅಂತ confirm ಆಯ್ತು...ಸ್ವಲ್ಪ ಹೊತ್ತು ಅಲ್ಲೇ ನಿಂತಿದ್ದೆ...ಯಾಕೋ ಅರುಣ್ ಸ್ವಲ್ಪ.. ಅಲ್ಲ, ಅಲ್ಲ ಸಿಕ್ಕಾಪಟ್ಟೆ ದಪ್ಪ ಆಗಿಬಿಟ್ಟಿದಾರೆ ಅಂತ ಅಂತ ಅನಿಸ್ತ ಇತ್ತು, (ಆಮೇಲೆ ಗೂತಾಯ್ತು ಅದು ಅರುಣ್ ಅಲ್ಲ ಅಂತ) , Anyway its was the time to Swara Smarane . 7 ಗಂಟೆಗೆ ಶುರುವಾಗಬೇಕಿದ್ದ ಕಾರ್ಯಕ್ರಮ 7 .18 ಕ್ಕೆ ಶುರು ಆಯ್ತು.. Stage Design was excellent ...
,
ಮೊದಲೇ ತಿಳಿಸಿದ ಹಾಗೆ ಪಲ್ಲವಿ ಅವರು ಪಿ ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್, ರಾಜು ಅನಂತಸ್ವಾಮಿ, ಜಿ.ವಿ.ಅತ್ರಿ, ಪದ್ಮಚರಣ್, ಎಚ್.ಕೆ.ನಾರಾಯನ್ ಹಾಗೂ ವಸಂತ್ ಕನಕಾಪುರ್ ಅವರು ಸಂಯೋಜನೆ ಮಾಡಿದ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದರು..
ಮೊದಲ ಹಾಡು ನಮ್ಮೆಲರ ಹೃದಯಕ್ಕೆ ಬಹಳ ಹತ್ತಿರವಾದಂತಹ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು, ರಾಜನ್ಯರಿಪು ಪರಶುರಾಮನಮ್ಮನ ನಾಡು, ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು......ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು,,,ಕಾವೇರಿ ಗೋದೆಯರು ಮೈದೊಳೆವ ನಲುನಾಡು" ಈ ಹಾಡನ್ನ ತುಂಬಾ ಗಾಯಕರಿಂದ ಕೇಳಿದ್ದೆ...ಆದರೆ ಪಲ್ಲವಿಯವರ ಕಂಠಸಿರಿಯಿಂದ ಬಂದತಹ ಈ ಗೀತೆ ಅಲ್ಲಿ ನೆರೆದ ಎಲ್ಲ ಜನರನ್ನ ಮೈ ಮರೆಯುವಂತೆ ಮಾಡಿತು. (ಇಗಲೂ ಸಹ ಆ ಹಾಡನ್ನ ನೆಟ್ ಅಲ್ಲಿ ಹುಡುಕ್ತಾ ಇದೀನಿ,,,ಸಿಕ್ತ ಇಲ್ಲ.). ಆಮೇಲೆ ಶುರು ಆಯ್ತು ನೋಡಿ..... a flood of melody .. ದೇಹವೊಂದು ದೇವವೀಣೆ , ಸೋರುತಿಹುದು ಮನೆಯ ಮಾಳಿಗೆ, ಇಳಿದು ಬಾ ತಾಯೇ ಇಳಿದು ಬಾ, ಮಡಿಕೇರಿಲಿ ಮಂಜು,,,  But when she came up with ನಾಕು ತಂತಿ,, we couldnt say anything other than "once more"....

ಎಂ ಡಿ ಪಲ್ಲವಿ ಅವರು ಮಾತ್ರ ಆ high pitch ನಲ್ಲಿ ಆ ಹಾಡಿಗೆ ಜೀವ ಕೊಡಲು ಸಾದ್ಯ... ಕೆಲವು ಹಾಡುಗಳು ಅಶ್ವಥ್ ಅವರ ನೆನಪು ಮರುಕಳಿಸುವಂತೆ ಮಾಡ್ತು. ಆಮೇಲೆ ಅವರ CD ಬಿಡುಗಡೆ ಸಮಾರಂಭ, ಅದನಂತರ SP ಮತ್ತು KLS ಸ್ವಾಮಿ ಅವರಿಂದ ಹಾಸ್ಯ ಚಟಾಕಿಗಳು... ನಂತರ ಎರಡು ಸುಮದುರ ಹಾಡುಗಳು... ಒನ್ ವಾಸ್ ದಿ ಕ್ಲಾಸಿಕ್ ಸಾಂಗ್...ದೀಪವು ನಿನ್ನದೇ ಗಾಳಿಯು ನಿನ್ನದೇ,...ಕೇಳುವ ಭಾಗ್ಯ ಪಡೆದ ಕಿವಿಗಳು ಸಹ ನಮ್ಮದೇ... ಅಲ್ಲಿಗೆ ಕಾರ್ಯಕ್ರಮ ಮುಗಿತು,..ನಾವು ಗಾಡಿ ಬಿಡಬೇಕಾಯ್ತು... ಸಿಕ್ಕಾಪಟ್ಟೆ ಸಿಹಿ ನೆನಪುಗಳೊಂದಿಗೆ....

ಈಗಲೂ ಪಲ್ಲವಿ ಹಾಡು ಕೇಳಿದರೆ ಅವರ ಲೈವ್ concert ನೆನಪಾಗತ್ತೆ.. ಮುಂದಿನ ಕಾರ್ಯಕ್ರಮಕ್ಕೆ ಕಾಯ್ತಾ ಇದೀನಿ... ದಿನಾ Thatskannada ನೋಡ್ತಾ ಇದೀನಿ... ಕೇಳದ ದನಿಗೆ ಹಂಬಲಿಸಿದೆ ಮನ... ಕೆಳಬಲ್ಲೆನೆ ಒಂದು ದಿನಾ,,, ? ಕೇಳದ ದನಿಯನು..